Monday, July 4, 2022

Latest Posts

ಮೈಸೂರು| ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ 10 ವರ್ಷ ಶಿಕ್ಷೆ

ಮೈಸೂರು: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ದೀಪು ಎಂಬಾತನೇ ಶಿಕ್ಷೆಗೊಳಗಾದವ. ಮೈಸೂರು ನಗರದ ಬಡಾವಣೆಯೊಂದರ ನಿವಾಸಿಯೋರ್ವರು ತಮ್ಮ ಪುತ್ರಿಯನ್ನು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಬರುವಂತೆ ಎದುರು ಮನೆಯ ನಿವಾಸಿ ದೀಪುವಿನಲ್ಲಿ ಕೋರಿಕೊಂಡಿದ್ದರು. ೨೦೧೬ರಲ್ಲಿ ಬಾಲಕಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಪ್ರೀತಿಸುವಂತೆ ಒತ್ತಾಯಿಸಿ ಬಳಿಕ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬುದು ತಿಳಿದು ಬಂದಿದೆ. ಪೋಷಕರ ಗಮನಕ್ಕೆ ತಂದರೆ ತಂದೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಸ್ನೇಹಿತರ ಮನೆಯಲ್ಲಿ ೨೦೧೮ ಜ.೨೬ರಂದು ಬಾಲಕಿಯ ಮೇಲೆ ಮತ್ತೆ ಅತ್ಯಾಚಾರ ನಡೆಸಿದ್ದು, ಬಾಲಕಿ ಗರ್ಭಿಣಿಯಾಗಿದ್ದಳು ಎಂದು ಹೇಳಲಾಗಿದೆ.
ಈ ಸಂಬoಧ ಪ್ರಕರಣ ಮೈಸೂರು ನಗರದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿ ವಿಚಾರಣೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯಲ್ಲಿ ಎಸ್ ಐ ಸುರೇಶ್ ಕುಮಾರ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಬಿ,.ಎಸ್.ಜಯಶ್ರೀ ಅವರು, ಆರೋಪಿಯ ಮೇಲಿನ ಆರೋಪ ಸಾಭೀತಾದ ಕಾರಣ ಶಿಕ್ಷೆ ಪ್ರಕಟಿಸುವುದರ ಜೊತೆಗೆ ೨೦ಸಾವಿರ ರೂ.ದಂಡ ವಿಧಿಸಿ, ನೊಂದ ಬಾಲಕಿಗೆ ಪರಿಹಾರವಾಗಿ ೩ಲಕ್ಷರೂ.ನೀಡುವಂತೆ ಆದೇಶಿಸಿದ್ದಾರೆ.
ಸರ್ಕಾರದ ಅಭಿಯೋಜಕರಾದ ಶಿವರುದ್ರಸ್ವಾಮಿ ಹಾಗೂ ಎಂ.ಎಸ್,ಮoಜುಳಾ ವಾದಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss