Wednesday, June 29, 2022

Latest Posts

ಮೈಸೂರು| ಬಿಜೆಪಿ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ 511 ನೇ ಜಯಂತಿ: ಭಾವಚಿತ್ರಕ್ಕೆ ಪುಷ್ಪನಮನ

ಮೈಸೂರು: ಬಿಜೆಪಿನಗರ ಮತ್ತು ಗ್ರಾಮಾಂತರ ವತಿಯಿಂದ ನಾಡಪ್ರಭು ಕೆಂಪೇಗೌಡ 511 ನೇ ಜಯಂತಿಯನ್ನು ಚಾಮರಾಜ ಪುರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ನಾಡಪ್ರಭು ಕೆಂಪೇಗೌಡರನ್ನು ಸ್ಮರಿಸಲಾಯಿತು.

ಪುಷ್ಪಾರ್ಚನೆ ಮಾಡಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ, ಕೆಂಪೇಗೌಡರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ. ಬೆಂಗಳೂರು ಇಂದು ಅಪಾರ ಸಂಪತ್ತನ್ನು ಹೊಂದಿಕೊಂಡು, ರಾಜಧಾನಿಯಾಗಿ ಕೋಟಿ ಜನರಿಗೆ ನೆರಳು ಕೊಡಲು ಕೆಂಪೇಗೌಡರ ಶ್ರಮ ಕಾರಣವಾಗಿದೆ, ರಾಜ್ಯದ ಜನತೆ ಅವರನ್ನು ಎಂದೆಂದೂ ಮರೆಯಬಾರದು.’

ಮಹನೀಯರ ಜಯಂತಿ ಮರೆಯದಿರಿ:‘ಕೆಂಪೇಗೌಡರು ಅಂದಿನ ದಿನಗಳಲ್ಲೇ ಸುಂದರ ನಗರದ ಪರಿಕಲ್ಪನೆ ರೂಪಿಸಿದ್ದರು. ಭದ್ರವಾದ ಕೋಟೆ ಕಟ್ಟಿ ನಾಡಿನ ಗಡಿ ಹಾಗೂ ಪ್ರಜೆಗಳ ರಕ್ಷಣೆ ಕೆಲಸ ಮಾಡಿದ್ದರು. ಆಡಳಿತದಲ್ಲಿ ಸ್ತ್ರೀಯರಿಗೆ ಗೌರವ ನೀಡುವ ಅಂಶಗಳನ್ನು ಅಳವಡಿಸಿಕೊಂಡಿದ್ದರು. ರಾಜ್ಯದ ಸಮಸ್ತ ಅಭಿವೃದ್ಧಿ ಮಾಡುವ ಕಲ್ಪನೆ ಅವರದಾಗಿತ್ತು. ಹಾಗಾಗಿ ನಾಡಿನ ಪ್ರಭು ಕೆಂಪೇಗೌಡ ಎಂಬ ಖ್ಯಾತಿ ಗಳಿಸಿದರು’ ಎಂದರು.

‘ಕೆಂಪೇಗೌಡರು ಕೇವಲ ಒಂದು ಜನಾಂಗದ ನಾಯಕರಲ್ಲ. ಅವರ ಪ್ರಯತ್ನದ ಫಲವಾಗಿ ಬೆಂಗಳೂರು ಜನ್ಮ ತಾಳಿತು. ಇಂದು ಆ ನಗರ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ’ ಇದೇ ಸಂದರ್ಭದಲ್ಲಿ  ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಹಾಗೂ ಎಚ್ ಜಿ ಗಿರಿಧರ್, ಗ್ರಾಮಾಂತರ ಮುಖಂಡರಾದ, ರಾಜ್‌ಕುಮಾರ್  ನಗರ ಪಾಲಿಕ ಸದಸ್ಯರಾದ ಲಕ್ಷ್ಮಿ ಮಾದೇಗೌಡರು ಪ್ರಮಿಳಾ ಭರತ್ ,ಮುಖಂಡರಾದ ಲಕ್ಷ್ಮೀದೇವಿ, ಗೋಕುಲ್ ಗೋವರ್ಧನ್, ಜಯಪ್ರಕಾಶ್, ಮಹಿಳಾ ಅಧ್ಯಕ್ಷೆ ಹೇಮ ನಂದೀಶ್, ಪ್ರದೀಪ್, ಪೈಲ್ವಾನ್ ರವಿ, ವೇದ, ನೇಹಾ ನೈಯನ ,ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ಬಿಎಂ ರಘು, ನಾಣಿಗೌಡ ,ಕಾರ್ತಿಕ್ ,ರವಿತೇಜ ,ಹಾಗೂ ಇತರ ಮುಖಂಡರು ಇದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss