ಮೈಸೂರು: ಮೈಸೂರಿನ ವಿಜಯನಗರದ ವಾರ್ಡ್ ನಂ ೨,೩. ಮತ್ತು ೨೦ ರ ಮುಖ್ಯರಸ್ತೆಗೆ ೪.೯೮ ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಯನ್ನು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಗುರುವಾರ ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಕಾಮಗಾರಿ ವಿಳಂಭವಾಗಿ ಸಾಗುತ್ತಿರುವುದನ್ನು, ಇದರಿಂದಾಗಿ ಜನರಿಗೆ ತೀವ್ರ ತೊಂದರೆಯಾಗುತ್ತಿರುವುದನ್ನು ಗಮನಿಸಿ, ಸಂಬAಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರಾಭಿವೃದ್ದಿ ಇಲಾಖೆಯ ವಿಶೇಷ ಅನುದಾನದಲ್ಲಿ ವಿಜಯನಗರ ೧ನೇ ಹಂತ ವಾಟರ್ ಟ್ಯಾಂಕ್ ಬಳಿಯಿಂದ ಹೊರವರ್ತುಲ ರಸ್ತೆಯವರೆಗೆ ೩.೧೫ ಕಿ.ಮೀ ಉದ್ದದ ರಸ್ತೆ ಅಗಲೀಕರಣ, ಡಾಂಬರೀಕರಣ, ಅಗತ್ಯವಿರುವ ಕಡೆ ವಾಕ್ಸ್ ಚರಂಡಿ ನಿಮಾಣ ಹಾಗೂ ಫುಟ್ ಪಾತ್ ನಿರ್ಮಾಣದ ಒಟ್ಟು ೪.೯೮ ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ತಿಂಗಳುಗಳೇ ಕಳೆದರೂ ಕಾಮಗಾರಿ ನಿಗದಿತ ಸಮಯದೊಳಗೆ ಮುಗಿಯದೆ, ನಿಧಾನವಾಗಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿವಿಧೆಡೆಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿಮAಡಳಿಯವರು ರೈಸಿಂಗ್ ಮೇನ್ ಡೆಕ್ ಗಳ ನಿರ್ಮಾಣವನ್ನು ೧೦ ದಿವಸಗಳ ಒಳಗಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ರಸ್ತೆಯಲ್ಲಿರುವ ಬೋರ್ವೆಲ್ಗಳ ವಿದ್ಯುತ್ ಮೀಟರ್ ಗಳನ್ನು ಕೂಡಲೇ ೧೦ ದಿವಸಗಳ ಒಳಗಾಗಿ ರಸ್ತೆಯ ಪಕ್ಕಕ್ಕೆ ಸ್ಥಳಾಂತರಿಸಲು ಸೂಚನೆ ನೀಡಿದರು. ರಸ್ತೆಯಲ್ಲಿರುವ ೬ ಮರಗಳನ್ನು ಕೂಡಲೇ ತೆರವುಗೊಳಿಸಬೇಕು, ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ಪುಟ್ ಬಾತ್ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಲು ನಗರಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸ್ತುತ ಜನರು ಓಡಾಡಲು ತೊಂದರೆಯಾಗಿರುವ ಕಡೆಗಳಲ್ಲಿ ರಸ್ತೆಯ ಗುಂಡಿಯನ್ನು ಮುಚ್ಚಿ, ನೀರು ನಿಲ್ಲದಂತೆ ಕ್ರಮವಹಿಸಿ, ಸುಗಮ ಸಂಚಾರಕ್ಕೆ ಅವಕಾಶ ನೀಡುವಂತೆ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡದರು.
ಈ ವೇಳೆ ಮಹಾನಗರ ಪಾಲಿಕೆ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕ ಎಂ.ಯು. ಸುಬ್ಬಯ್ಯ, ಪಾಲಿಕೆ ಸದಸ್ಯೆ ಲಕ್ಷಿ÷್ಮ ಶಿವಣ್ಣ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್ ಶಂಕರ್, ಕಾರ್ಯಪಾಲಕ ಇಂಜಿನಿಯರ್ ಸುವರ್ಣ, ವಾಣಿವಿಲಾಸ ನೀರು ಸರಬರಾಜು ಮಂಡಳಿಯ, ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್, ಮಹಾನಗರಪಾಲಿಕೆ ವಲಯ ಕಚೇರಿ-೫ ರ ಸಹಾಯಕ ಕಮೀಷನರ್ ವೀರೇಶ್, ಅಭಿವೃದ್ಧಿ ಅಧಿಕಾರಿ ಶ್ರೀ ಮನುಗೌಡ, ಬಿಜೆಪಿ ಮುಖಂಡರಾದ ಕುಮಾರಗೌಡ, ಯವ ಮೋರ್ಚಾ ಆಧ್ಯಕ್ಷ ಕಿರಣಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್, ರಮೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ರಾಮೇಗೌಡ, ದಿನೇಶ್ ಗೌಡ, ಚರಣ್, ಪ್ರಮೋದ್, ಅಶೋಕ್, ಜಯಣ್ಣ ಮುಂತಾದವರುಗಳು ಹಾಜರಿದ್ದರು.