spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಮೈಸೂರು| ಬೀದಿ ನಾಯಿಗಳ ದಾಳಿಯಿಂದ ಚಿರತೆ ಮರಿಯನ್ನು ರಕ್ಷಿಸಿದ ಯುವಕರು

ಮೈಸೂರು: ಬೀದಿ ನಾಯಿಗಳಿಂದ ದಾಳಿಯಿಂದ ಚಿರತೆ ಮರಿಯೊಂದನ್ನು ಯುವಕರು ರಕ್ಷಿಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮೈಲಾಂಬೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಗ್ರಾಮದ ಜಮೀನಿನಲ್ಲಿ ಚಿರತೆಯೊಂದು ಮರಿಯನ್ನು ಹಾಕಿದ್ದು, ತಾಯಿಯಿಂದ ಬೇರ್ಪಟ್ಟಿದ್ದ ಈ ಮರಿ ಗ್ರಾಮದೊಳಗೆ ಬರಲು ಪ್ರಯತ್ನ ನಡೆಸುತ್ತಿತ್ತು. ಇದನ್ನು ಗಮನಿಸಿದ ಬೀದಿ ನಾಯಿಗಳು ಅದರ ಮೇಲೆ ದಾಳಿ ನಡೆಸಲು ಯತ್ನಿಸುತ್ತಿದ್ದವು. ಇದನ್ನು ನೋಡಿದ ಗ್ರಾಮದ ನಾಲ್ವರು ಯುವಕರು, ಬೀದಿ ನಾಯಿಗಳನ್ನು ಓಡಿಸಿ, ಚಿರತೆ ಮರಿಯನ್ನು ರಕ್ಷಿಸಿ, ಆರೈಕೆ ಮಾಡಿದರಲ್ಲದೆ, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯ ವಶಕ್ಕೆ ಚಿರತೆ ಮರಿಯನ್ನು ನೀಡಿದರು.

ಮರಿಯನ್ನು ತೆಗೆದುಕೊಂಡು ಹೋದ ಸಿಬ್ಬಂದಿ ಅದರ ಪೋಷಣೆ ಮಾಡಿ, ಮತ್ತೆ ಅದರ ತಾಯಿಯೊಂದಿಗೆ ಸೇರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇತ್ತೀಚೆಗೆ ಕಾಡನಿಂದ ನಾಡಿಗೆ ಬರುತ್ತಿರುವ ಚಿರತೆಗಳು ರೈತರ ಜಮೀನುಗಳಲ್ಲಿ, ಕಬ್ಬಿನ ಗದ್ದೆಗಳಲ್ಲಿ ಮರಿ ಹಾಕುತ್ತಿವೆ. ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಕಳೆದ ಐದು ದಿನಗಳ ಹಿಂದೆ ಆರು ಚಿರತೆ ಮರಿಗಳನ್ನು ರಕ್ಷಿಸಲಾಗಿತ್ತು.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap