ಹೊಸದಿಗಂತ ವರದಿ,ಮೈಸೂರು:
2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಮೈಸೂರು ಜಿಲ್ಲೆಯ ರೈತರು ಬೆಳೆದ ರಾಗಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ರಾಜ್ಯ ಸರ್ಕಾರ ಸಂಬoಧಪಟ್ಟ ಇಲಾಖೆಗೆ ಆದೇಶಿಸಿದೆ.
ಮೈಸೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಉತ್ತಮ ಗುಣಮಟ್ಟದ ರಾಗಿಯನ್ನು ರೈತರಿಂದ ಖರೀದಿಸಲಾಗುವುದು. ಜಿಲ್ಲೆಯಲ್ಲಿ 12 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತಬಾಂಧವರು ತಾವು ಬೆಳೆದ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಲು ತಿಳಿಸಲಾಗಿದೆ.
ಮೈಸೂರು ತಾಲ್ಲೂಕಿನ ಬಂಡಿಪಾಳ್ಯದ ಎಪಿಎಂಸಿ, ನಂಜನಗೂಡಿನ ಎಪಿಎಂಸಿ, ಟಿ.ನರಸೀಪುರದ ಎಪಿಎಂಸಿ, ಬನ್ನೂರಿನ ಎಪಿಎಂಸಿ, ಕೆ.ಆರ್.ನಗರದ ಎಪಿಎಂಸಿ, ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಉಗ್ರಾಣ ಹಾಗೂ ಸರಗೂರಿನ ಎಪಿಎಂಸಿ, ಪಿರಿಯಾಪಟ್ಟಣ ಎಪಿಎಂಸಿ, ಬೆಟ್ಟದಪುರದ ಎಪಿಎಂಸಿ ವರಣಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಬೆಂಬಲ ಬೆಲೆ ಯೋಜನೆಯಡಿ ರಾಗಿಯನ್ನುಪ್ರತಿ ಕ್ವಿಂಟಾಲ್ ಗೆ 3,295 ರೂ. ರಂತೆ ಖರೀದಿಸಲಾಗುವುದು.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಡಿಸೆಂಬರ್ 08ರಿಂದ ಖರೀದಿಗೆ ನೋಂದಣಿ ಪ್ರಾರಂಭಿಸಲಾಗುತ್ತಿದೆ. ರಾಗಿ ಖರೀದಿಯನ್ನು ಡಿಸೆಂಬರ್ ಮಾಹೆಯಿಂದ ಪ್ರಾರಂಭಿಸಿ 15-03-2021ಕ್ಕೆ ಮುಕ್ತಾಯಗೊಳಿಸಲಾಗುವುದು. ಮೈಸೂರಿನ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯುಖರೀದಿ ಏಜೆನ್ಸಿಯಾಗಿರುತ್ತದೆ.
ಅನ್ಯ ವಸ್ತುಗಳು, ಇತರೆ ಆಹಾರ ಧಾನ್ಯಗಳು, ವಿರೂಪಗೊಂಡ ಧಾನ್ಯಗಳು, ಸ್ವಲ್ಪ ವಿರೂಪಗೊಂಡ ಧಾನ್ಯಗಳು ಮತ್ತು ತೇವಾಂಶ ರೈತರಿಂದ ಎಫ್ಎಕ್ಯೂ ಗುಣಮಟ್ಟದ ರಾಗಿಯನ್ನು ಖರೀದಿಸಲಾಗುವುದು. ರಾಗಿಯನ್ನು ನೊಂದಾಯಿಸಿಕೊAಡ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿಯನ್ನು ಮಾತ್ರ ಒಬ್ಬ ರೈತರಿಂದ ಖರೀದಿಸಲಾಗುವುದು.
ರೈತರಿಗೆ ಕೃಷಿ ಇಲಾಖೆಯಿಂದ ನೀಡಿರುವ “ಫ್ರೂಟ್ಸ್” ಐಡಿಯನ್ನು ನೊಂದಣಿ ಅಥವಾ ಖರೀದಿ ಕೇಂದ್ರಕ್ಕೆ ತಂದು ಬೆಂಬಲ ಬೆಲೆಯ ಯೋಜನೆಯಡಿ ರಾಗಿ ಮಾರಾಟ ಮಾಡಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದು. ಈ ಪ್ರೂಟ್ಸ್ ಐಡಿಯಲ್ಲಿ ಯಾವುದಾದರು ನ್ಯೂನತೆಗಳಿದ್ದಲ್ಲಿ ಕೃಷಿ ಇಲಾಖೆಯಿಂದಲೇ ಸರಿಪಡಿಸಿಕೊಂಡು. ತದನಂತರ ನೋಂದಾಯಿಸಿಕೊಳ್ಳುವುದು.
ನೊಂದಾಯಿಸಿಕೊoಡ ರೈತರು ತಾವು ರಾಗಿ ಸರಬರಾಜು ಮಾಡುವ ದಿನಾಂಕವನ್ನು ಖರೀದಿ ಕೇಂದ್ರವು ನಿಗಧಿ ಪಡಿಸಿರುವ ದಿನಾಂಕದAದೇ ಸರಬರಾಜು ಮಾಡಬೇಕು. ರೈತರು ಸರಬರಾಜು ಮಾಡುವ ರಾಗಿಯ ಗುಣಮಟ್ಟವನ್ನು ಗುಣಮಟ್ಟ ಪರಿವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುವುದು.
ನೊಂದಾಯಿಸಿಕೊoಡ ರೈತರು ಒಂದು ಬಾರಿ ಉಪಯೋಗಿಸಿದ 50 ಕೆ.ಜಿ ತೂಕದ ಗೋಣಿ ಚೀಲದಲ್ಲಿ ರಾಗಿಯನ್ನು ಸರಬರಾಜು ಮಾಡಬೇಕು. ರೈತರಿಗೆ 50 ಕೆ.ಜಿ ಸಾಮರ್ಥ್ಯದ ಒಂದು ಬಾರಿ ಉಪಯೋಗಿಸಿದ ಗೋಣಿ ಚೀಲಗಳ ಅವಶ್ಯವಿದ್ದಲ್ಲಿ ನ್ಯಾಯಬೆಲೆ ಅಂಗಡಿ ಮೂಲಕ ಪಡೆಯಲು ಸಂಬoಧಿಸಿದ ತಾಲ್ಲೂಕು ತಹಶೀಲ್ದಾರರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.