ಮೈಸೂರಿನಲ್ಲಿ ಮತ್ತೆ ಮೂವರಿಗೆ ಕೊರೋನಾ ವೈರಸ್ ದೃಢ, ಸೋಂಕು ಪೀಡಿತರ ಸಂಖ್ಯೆ 17ಕ್ಕೆ ಏರಿಕೆ

0
94

ಮೈಸೂರು: ಮಹಾಮಾರಿ ಕೊರೋನಾ ವೈರಸ್ ಮತ್ತೆ ಮೂವರಿಗೆ ಅಂಟಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಪೀಡಿತ ರ ಸಂಖ್ಯೆ 17ಕ್ಕೇರಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ಜುಬಿಲಿಯಂಟ್ ಔಷಧ ತಯಾರಿಕಾ ಕಂಪನಿಯ ಮತ್ತೆ ಇಬ್ಬರು ಕಾರ್ಮಿಕರಿಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ.

ಇವರಲ್ಲಿ ಒಬ್ಬರಿಗೆ, 37 ವರ್ಷ, ಮತ್ತೊಬ್ಬರಿಗೆ 27 ವರ್ಷವಾಗಿದ್ದು, ಇಬ್ಬರೂ ನಂಜನಗೂಡಿನ ನಿವಾಸಿಗಳು. ಇವರಲ್ಲಿ 37ವರ್ಷದ ವ್ಯಕ್ತಿ ಕೊರೋನಾ ವೈರಸ್ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದು, ಬೆಂಗಳೂರಿನ ನಿವಾಸಿಯಾದ 33ವರ್ಷದ ವ್ಯಕ್ತಿ ಗೆ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಸೋಂಕಿತ ಈ ಮೂವರನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

LEAVE A REPLY

Please enter your comment!
Please enter your name here