Saturday, June 25, 2022

Latest Posts

ಮೈಸೂರು| ಭಾರೀ ಮಳೆ, ಬಿರುಗಾಳಿಗೆ ಮುರಿದು ಬಿದ್ದ ಮರಗಳಿಂದ ೨೨ ಕ್ಕೂ ಹೆಚ್ಚು ಪಕ್ಷಿಗಳಿಗೆ ಗಂಭೀರ ಗಾಯ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಭಾನುವಾರ ಹಾಗೂ ಸೋಮವಾರ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದಿದ್ದು, ಈ ಮರಗಳಲ್ಲಿ ವಾಸವಿದ್ದ ೨೨ಕ್ಕೂ ಹೆಚ್ಚು ವಿವಿಧ ಬಗೆಯ ಪಕ್ಷಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೈಸೂರಿನ ಎನ್.ಆರ್.ಮೊಹಲ್ಲಾ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮುರಿದು ಬಿದ್ದಿದ್ದ ಮರಗಳಲ್ಲಿ ಗಾಯಗೊಂಡಿದ್ದ ಪಕ್ಷಿಗಳು ನರಳುತ್ತಾ ಬಿದ್ದಿರುವ ವಿಷಯವನ್ನು ಪಕ್ಷಿ ಪ್ರಿಯರು ಪ್ರಗತಿ ಚಾರಿಟಬಲ್ ಟ್ರಸ್ಟ್ನ ಬರ್ಡ್ಸ್ ಆಸ್ಪತ್ರೆಯವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆ ಸ್ಥಳಕ್ಕೆ ಧಾವಿಸಿದ ಆಸ್ಪತ್ರೆಯವರು ಮರಗಳಡಿಯಲ್ಲಿ ಗಾಯಗೊಂಡು ನರಳುತ್ತಾ ಬಿದ್ದಿದ್ದ ಕಾಗೆಗಳು, ಪಾರಿವಾಳ ಸೇರಿದಂತೆ ವಿವಿಧ ಬಗೆಯ ಪಕ್ಷಿಗಳನ್ನು ರಕ್ಷಿಸಿ, ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅವುಗಳಿಗೆ ಚಿಕಿತ್ಸೆ ನೀಡುವ ಮೂಲಕ ಆರೈಕೆ ಮಾಡುತ್ತಿದ್ದಾರೆ. ಆಸ್ಪತ್ರೆಯ ಉಸ್ತುವಾರಿ ಅಜಯ್‌ಕುಮಾರ್ ಜೈನ್ ಅವರು ಗಾಯಗೊಂಡಿರುವ ಪಕ್ಷಿಗಳನ್ನು ಆರೈಕೆ ಮಾಡುತ್ತಿದ್ದಾರೆ. ಅವುಗಳು ಚೇತರಿಸಿಕೊಂಡು, ಹಾರಲು ಶಕ್ತö್ಯವಾದಾಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಅಜಯ್‌ಕುಮಾರ್ ಜೈನ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss