ಮೈಸೂರು: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷರಾದ ಸುಧಾಮೂರ್ತಿ ಅವರು ಮೈಸೂರು ಮೃಗಾಲಯದ ಪ್ರಾಣಿ-ಪಕ್ಷಿಗಳ ಪಾಲನೆ ಪೋಷಣೆಗಾಗಿ ಮತ್ತೊಮ್ಮೆ ೨೦ ಲಕ್ಷ ರೂ. ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಮೃಗಾಲಯದ ಪ್ರಾಣಿಗಳ ಆರೋಗ್ಯ ಮತ್ತು ನಿರ್ವಹಣೆಗಾಗಿ ಉದಾತ್ತವಾಗಿ ದೇಣಿಗೆ ನೀಡುತ್ತಾ ಬಂದಿರುವ ಸುಧಾಮೂರ್ತಿ ಅವರು ಈ ಹಿಂದೆ ಕೋವಿಡ್-೧೯ ಹಿನ್ನೆಲೆ ಮೇ ೧೧ ರಂದು ೨೦ ಲಕ್ಷ ರೂ. ದೇಣಿಗೆ ನೀಡಿದ್ದರು. ಈಗ ಮತ್ತೊಮ್ಮೆ ಸೆಪ್ಟೆಂಬರ್ ೨೫ ರಂದು ಮೃಗಾಲಯ ಪ್ರಾಣಿಗಳ ಕಲ್ಯಾಣಕ್ಕಾಗಿ ೨೦ ಲಕ್ಷ ರೂ. ನೀಡಿದ್ದಾರೆ. ಮೃಗಾಲಯದ ಬಗ್ಗೆ ಅವರಿಗಿರುವ ಅಭಿಮಾನ, ಕಾಳಜಿಗೆ ಮೃಗಾಲಯವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.