Monday, August 8, 2022

Latest Posts

ಮೈಸೂರು ಮೃಗಾಲಯಕ್ಕೆ ಹರಿದು ಬಂದ ನೆರವಿನ ಮಹಾಪೂರ: ವಿವಿಧ ಸಂಸ್ಥೆಗಳಿoದ ಪ್ರಾಣಿ, ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು: ಮೈಸೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯಕ್ಕೆ ವಿವಿಧ ಸಂಸ್ಥೆಗಳಿoದ ನೆರವು ಬಂದಿದೆ. ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ವಿವಿಧ ಸಂಸ್ಥೆಗಳು ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆದಿದ್ದಾರೆ.
ರಾಯಚೂರಿನ ಡಾ.ಪ್ರಶಾಂತ್ ಎಚ್.ಟಿ ಅವರು ೫ ಸಾವಿರ ರೂ. ಪಾವತಿಸಿ ಚಿರತೆ ಚೆಕ್ಕು, ಮೈಸೂರಿನ ಜಗನ್ ಮಹೋನ್ ಎಚ್.ಡಿ ಅವರು ೭ ಸಾವಿರ ರೂ. ಪಾವತಿಸಿ ಕಾಳಿಂಗ ಸರ್ಪ ದತ್ತು ಪಡೆದಿದ್ದಾರೆ.
ಇನ್ನರ್ ವೀಲ್ ಕ್ಲಬ್ ಮೈಸೂರು ಸೌತ್ ಈಸ್ಟ್ ವತಿಯಿಂದ 2 ಸಾವಿರ ರೂ. ಪಾವತಿಸಿ ೨ ಲವ್ ಬರ್ಡ್, ಸಂಯುಕ್ತ ಲಯನ್ಸ್ ಕ್ಲಬ್ ಆಫ್ ಮೈಸೂರ್ ಅರಮನೆ ಸಿಟಿ ಕ್ಲಬ್ ವತಿಯಿಂದ ೧ ಸಾವಿರ ರೂ. ಪಾವತಿಸಿ ಲವ್‌ಬರ್ಡ್, ಸೌಚಿಶೋನಶ್ರೇಯ ಅವರು ೩,೫೦೦ ರೂ. ಪಾವತಿಸಿ ನವಿಲು, ಎಸ್.ಆರ್.ಸತೀಶ್ ಚಂದ್ರ ಅವರು ೩,೫೦೦ ರೂ. ಪಾವತಿಸಿ ಬಿಳಿ ನವಿಲು, ಮೊಹಮ್ಮದ್ ಹಮ್ದಾನ್ ಅವರು ೧ ಸಾವಿರ ರೂ. ಪಾವತಿಸಿ ಕಾಕಟೈಲ್ ಅನ್ನು ದತ್ತು ಪಡೆದಿದ್ದಾರೆ,
ಬಿ.ಎನ್.ನಟರಾಜ್ ಅವರು ೨ ಸಾವಿರ ರೂ. ಪಾವತಿಸಿ ನಕ್ಷತ್ರದ ಆಮೆ, ಸ್ನೇಹ ಜೆ. ಅವರು ೩,೫೦೦ ರೂ. ಪಾವತಿಸಿ ನವಿಲು, ವೈನವಿ ವಿನಯ್ ಅವರು ೨೦ ಸಾವಿರ ರೂ. ಪಾವತಿಸಿ ಫ್ಲೆಮಿಂಗೊ, ಪ್ರವೀಣ್ ಎಸ್. ಅವರು ೨ ಸಾವಿರ ರೂ. ಪಾವತಿಸಿ ನಕ್ಷತ್ರದ ಆಮೆ, ಯಾಶಿಕ ಅವರು ೩,೫೦೦ ರೂ. ಪಾವತಿಸಿ ಬಿಳಿ ನವಿಲು, ಮಂಜುಳ ಸಿ. ಅವರು ೫ ಸಾವಿರ ರೂ. ಪಾವತಿಸಿ ನಾಲ್ಕು ಕೊಂಬಿನ ಜಿಂಕೆ ದತ್ತು ಸ್ವೀಕರಿಸಿರುತ್ತಾರೆ.
ಸಮಾನ ಮನಸ್ಕರು ಅವರು ೪ ಸಾವಿರ ರೂ. ಪಾವತಿಸಿ ರೈನ್‌ಬೊ ಲೊರಿಕೀಟ್ ಮತ್ತು ನಕ್ಷತ್ರದ ಆಮೆ, ರೇಖಾ ಎಂ. ಎಂಬುವವರು ೭,೫೦೦ ರೂ. ಪಾವತಿಸಿ ಜಿಂಕೆ, ಮಂಡ್ಯದ ಮೋಹನ ಕುಮಾರ ಅವರು ೧ ಸಾವಿರ ರೂ. ಪಾವತಿಸಿ ಕೇರೆ ಹಾವು ಹಾಗೂ ಮುಂಬೈನ ಸೌರಭ್ ಪ್ರಮಣಿಕ್ ಅವರು ೧ ಸಾವಿರ ರೂ. ಪಾವತಿಸಿ ಲವ್‌ಬರ್ಡ್ ಅನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣಿಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣೆಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss