Saturday, August 13, 2022

Latest Posts

ಮೈಸೂರು ಮೃಗಾಲಯದ ಆನೆ, ಸಿಂಹ, ಚಿರತೆ, ನವಿಲುಗಳನ್ನು ದತ್ತು ಪಡೆದ ಪ್ರಾಣಿ ಪ್ರಿಯರು

ಮೈಸೂರು: ಅರಮನೆ ನಗರಿ ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಚಿರತೆ, ಆನೆ, ಸಿಂಹ, ನವಿಲುಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಬೆಳಗಾವಿಯ ಅನಿರುದ್ಧ್ ಪರಮಶೆಟ್ಟಿ ಎಂಬುವವರು ೭೦,೦೦೦ ರೂ. ಪಾವತಿಸಿ ಮೈಸೂರು ಮೃಗಾಲಯದ ` ಕಪ್ಪು ಚಿರತೆ ಮತ್ತು ಭಾರತಿಯ ಚಿರತೆ”ಯನ್ನು, ಮೈಸೂರಿನ ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ಮತ್ತು ಜಿಯೋನೆಟ್ ಕನ್ಸಲ್ಡೆಂಟ್, ಇವರು ೧ ಲಕ್ಷ ರೂ. ಪಾವತಿಸಿ ಸಿಂಹ, ಲಯನ್ಸ್ ಕ್ಲಬ್ ಆಫ್ ಮೈಸೂರು ವತಿಯಿಂದ ನಿಸರ್ಗ ಹಾಗೂ ಮಯೂರಿ ಎಂಬುವವರು ಸಹ ೧ ಲಕ್ಷ ರೂ. ಪಾವತಿಸಿ ಸಿಂಹ, ಲಯನ್ಸ್ ಕ್ಲಬ್ ಇಂರ‍್ನಾ÷್ಯಷನಲ್ ಡಿಸ್ಟಿಕ್ಟ್ ನ ಎಂಜೆಎಫ್ ಜಿಲ್ಲಾ ಗವರ್ನರ್ ಲಯನ್ ಡಾ.ಜಿ.ಎ.ರಮೇಶ್ ಎಂಬುವವರು ೧,೭೫,೦೦೦ ರೂ. ಪಾವತಿಸಿ ಆನೆ ಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿರುತ್ತಾರೆ.
ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಪ್ರಾಣೆಗಳ ಸಂರಕ್ಷಣೆ ಹಾಗೂ ಮೃಗಾಲಯ ನಿರ್ವಹಣಿಗೆ ಕೈಜೋಡಿಸಿದ ಎಲ್ಲರಿಗೂ ಮೃಗಾಲವು ಅಭಿನಂದಿಸುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss