Saturday, June 25, 2022

Latest Posts

ಮೈಸೂರು| ರೌಡಿಶೀಟರ್ ಜೊತೆ ಎಣ್ಣೆ ಪಾರ್ಟಿ ಮಾಡಿದ್ದ ಸಬ್ಇನ್ಸ್ಪೆಕ್ಟರ್ ಸಸ್ಪೆಂಡ್

ಮೈಸೂರು: ರೌಡಿಶೀಟರ್ ಜೊತೆ ಎಣ್ಣೆ ಪಾರ್ಟಿ ಮಾಡಿದ್ದಲ್ಲದೆ, ಆತನನ್ನು ತಬ್ಬಿಕೊಂಡು ಪೋಟೋ ತೆಗೆಯಿಸಿಕೊಂಡಿದ್ದ ಸಬ್ ಇನ್ಸ್ಪೆಕ್ಟರ್ರೊಬ್ಬರನ್ನು ಸಸ್ಪೆಂಡ್ ಮಾಡಲಾಗಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಠಾಣೆಯ ಎಸ್ ಐ ಲೋಕೇಶ್ ಸಸ್ಪೆಂಡ್ ಆದವರು.
ಎಸ್ಐ ಲೋಕೇಶ್ ಏಪ್ರೀಲ್ ೧೭ ರಂದು ರಾತ್ರಿ ೮ ಗಂಟೆಯಿoದ ತಡರಾತ್ರಿ ೨ಗಂಟೆಯವರೆಗೆ ರೌಡಿಶೀಟರ್ ಬಿ.ಬಿ.ದಿನೇಶ್ ಎಂಬಾತನ ಜೊತೆಯಲ್ಲಿ ಮದ್ಯಪಾನ ಮಾಡಿದ್ದರು. ಅಲ್ಲದೆ, ಬಿ.ಬಿ.ದಿನೇಶ್ ಸೇರಿದಂತೆ ಇತರರೊಂದಿಗೆ ತಬ್ಬಿಕೊಂಡಿರುವ ಪೋಟೋವನ್ನು ತೆಗೆಸಿಕೊಂಡಿದ್ದಾರೆ. ಶಿಸ್ತಿನ ಇಲಾಖೆಯಾದ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದು ಇಲಾಖಾ ನಿಯಮಕ್ಕೆ ವಿರುದ್ಧವಾಗಿ ರೌಡಿಗಳೊಂದಿಗೆ ಶಾಮೀಲಾಗಿರುವುದು ಕಂಡು ಬಂದಿದೆ. ಈ ಕುರಿತು ಸಮಗ್ರ ತನಿಖೆ ಮಾಡಿ ಇಲಾಖೆಯ ಗೌರವವನ್ನು ಎತ್ತಿ ಹಿಡಿದು ಸಂಬAಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪಿರಿಯಾಪಟ್ಟಣದ ವ್ಯಕ್ತಿಯೊಬ್ಬರು ಡಿವೈಎಸ್ಪಿಗೆ ಸಾಕ್ಷಿ ಸಮೇತ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಇಲಾಖೆಯ ವಿಚಾರಣೆ ಕಾಯ್ದಿರಿಸಿ, ಲೋಕೇಶ್ರನ್ನು ಸಸ್ಪೆಂಡ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss