Friday, July 1, 2022

Latest Posts

ಮೈಸೂರು| ಲಾಕ್‌ಡೌನ್ ಎಫೆಕ್ಟ್ : ಹೋಟೆಲ್ ಸದರನ್ ಸ್ಟಾರ್ ಮುಚ್ಚಲು ನಿರ್ಧಾರ

ಮೈಸೂರು: ಮೈಸೂರಿನ ವಿನೋಬ ರಸ್ತೆಯಲ್ಲಿರುವ ಹೋಟೆಲ್ ಸದರನ್ ಸ್ಟಾರ್‌ನ್ನು ಮುಚ್ಚಲು ಹೋಟೆಲ್‌ನ ಆಡಳಿತ ಮಂಡಳಿ ತೀರ್ಮಾನಿಸಿದೆ. ಮಹಾಮಾರಿ ಕೊರೋನಾ ವೈರಸ್ ಸೋಂಕು ಹರಡುವಿಕೆಯ ಹಿನ್ನಲೆಯಲ್ಲಿ ಕಳೆದ ಎರಡು ತಿಂಗಳಿAದ ಲಾಕ್‌ಡೌನ್ ಮಾಡಲಾಗಿದ್ದು, ಹೋಟೆಲ್‌ನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಹೋಟೆಲ್‌ನಲ್ಲಿ ೧೫೦ಕ್ಕೂ ಹೆಚ್ಚು ಮಂದಿ ಕೆಲಸ ನಿರ್ವಹಿಸುತ್ತಿದ್ದು, ಇವರಿಗೆ ವೇತನ ನೀಡುವುದು ಆಡಳಿತ ಮಂಡಳಿಗೆ ಸಂಕಷ್ಟವನ್ನು ತಂದಿದೆ. ಅಲ್ಲದೆ ಈಗ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ, ಪಾರ್ಸ್ಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತರ್ ರಾಜ್ಯ, ಜಿಲ್ಲೆಗಳಿಗೆ ಹೋಗಿ ಬರಲು ಅವಕಾಶವನ್ನು ನೀಡಿದ್ದರೂ, ಬಸ್ ಸಂಚಾರವನ್ನೂ ಮತ್ತೆ ಪ್ರಾರಂಭಿಸಿದ್ದರೂ, ಎಂದಿನAತೆ ಹೊರರಾಜ್ಯ, ಜಿಲ್ಲೆ, ದೇಶಗಳಿಂದ ಗ್ರಾಹಕರು, ಪ್ರವಾಸಿಗರು ಬರುವ ಸಾಧ್ಯತೆಗಳು ಬಹಳ ಕಡಿಮೆಯಿದೆ. ಹಾಗಾಗಿ ಹೋಟೆಲ್ ನಡೆಸುವುದು ಬಹಳ ಕಷ್ಟವಾಗಬಹುದು ಎಂಬ ಕಾರಣದಿಂದ ಹೋಟೆಲ್‌ನ್ನು ಮುಚ್ಚಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಬಗ್ಗೆ ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ೧೫೦ಕ್ಕೂ ಹೆಚ್ಚು ಮಂದಿಗೆ ನೋಟಿಸ್‌ನ್ನು ನೀಡಿದ್ದು, ಹಣಕಾಸು ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದೆ. ಹೋಟೆಲ್ ಮುಚ್ಚುವ ತೀರ್ಮಾನದಿಂದಾಗಿ ೧೫೦ಕ್ಕೂ ಹೆಚ್ಚು ಮಂದಿ ಕೆಲಸಗಾರರು, ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss