Wednesday, August 10, 2022

Latest Posts

ಮೈಸೂರು| ಲೆಕ್ಕಾಧಿಕಾರಿಗೆ ಕೊರೋನಾ ಸೋಂಕು, ನಗರಸಭೆ ಸೀಲ್‌ಡೌನ್

ಮೈಸೂರು: ಮೈಸೂರಿನ ಜೆ.ಕೆ.ಟೈರ್ಸ್ ಕಾರ್ಖಾನೆಯ ೨೫೦ಕ್ಕೂ ಹೆಚ್ಚು ಮಂದಿ ಕಾರ್ಮಿಕರಿಗೆ ತಗುಲಿರುವ ಮಹಾಮಾರಿ ಕೊರೋನಾ ಸೋಂಕು, ಅವರ ಕುಟುಂಬದ ಸದಸ್ಯರಿಗೂ ವಕ್ಕರಿಸುತ್ತಿದೆ. ಈ ಕಾರ್ಖಾನೆಯ ಉದ್ಯೋಗಿಯೊಬ್ಬರಿಗೆ ಸೋಂಕಿರುವುದು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪತ್ನಿಗೂ ಸೋಂಕು ಅಂಟಿದ್ದು, ಈಕೆ ಮೈಸೂರು ಜಿಲ್ಲೆಯ ನಂಜನಗೂಡಿನ ನಗರಸಭೆಯ ಲೆಕ್ಕಾಧಿಕಾರಿಯಾಗಿರುವ ಕಾರಣ ೩ ದಿನಗಳ ಕಾಲ ನಗರಸಭೆ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಸೋಂಕಿತ ಲೆಕ್ಕಾಧಿಕಾರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಕೆಯ ಸಂಪರ್ಕಕ್ಕೆ ಬಂದಿದ್ದವರ ಮಾಹಿತಿ ಸಂಗ್ರಹಿಸಿ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss