Thursday, July 7, 2022

Latest Posts

ಮೈಸೂರು: ವೈಯಕ್ತಿಕ ದ್ವೇಷಕ್ಕೆ ಹರಿಕಥೆ ಕಲಾವಿದರೊಬ್ಬರ ಮನೆ ಧ್ವಂಸ

ಮೈಸೂರು: ವೈಯಕ್ತಿಕ ದ್ವೇಷಕ್ಕೆ ಹರಿಕಥೆ ಕಲಾವಿದರೊಬ್ಬರ ಮನೆಯ ಮೇಲೆ ದುಷ್ಕರ್ಮಿಗಳು ಕಲ್ಲೆಸೆದು ಧ್ವಂಸ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ.

ಹರಿಕಥೆ ಕಲಾವಿದ ಸಚಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಮೇಲ್ಛಾವಣಿ ಹೊಡೆದು ಹೋಗಿರುವ ಪರಿಣಾಮ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ.

ಮೋರಿ ವಿಚಾರವಾಗಿ ಹರಿಕಥೆ ಕಲಾವಿದ ಸಚಿನ್ ಹಾಗೂ ಪಕ್ಕದ ಮನೆಯ ಸುರೇಶ್ ನಡುವೆ ಜಗಳವಾಗಿತ್ತು. ಈ ದ್ವೇಷಕ್ಕೆ ಸುರೇಶ್, ಸಚಿನ್ ಮನೆ ಮೇಲ್ಚಾವಣಿ ಮೇಲೆ ಕಲ್ಲೆಸೆದು ಧ್ವಂಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಿಳಿಗೆರೆ ಠಾಣೆಯ ಪೊಲೀಸ್‌ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss