Thursday, July 7, 2022

Latest Posts

ಮೈಸೂರು|  ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗನ ಹೆಸರಿನಲ್ಲಿ ಹುಲಿ ದತ್ತು ಸ್ವೀಕಾರ ನವೀಕರಣ

ಮೈಸೂರು: ಮೈಸೂರಿನ ಇತಿಹಾಸ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಅನೇಕ ಗಣ್ಯರು, ಸಾರ್ವಜನಿಕರು ಪ್ರಾಣಿ, ಪಕ್ಷಿಗಳಿಗೆ ನಿಗಧಿಪಡಿಸಿರುವ ಶುಲ್ಕ ಪಾವತಿಸಿ ವರ್ಷದ ಅವಧಿಗೆ ದತ್ತು ಸ್ವೀಕಾರ ಮಾಡಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡರ ಮೊಮ್ಮಗ ಸಂವೇದ್‌ಗೌಡ ಬಿ.ಹೆಚ್‌ಅವರ ಹುಟುಹಬ್ಬದ ಪ್ರಯುಕ್ತ ಕಳೆದ ವರ್ಷ ಮೈಸೂರಿನ ಮೃಗಾಲಯದ ಚಾಮುಂಡಿ ಹುಲಿ ದತ್ತು ಸ್ವೀಕಾರ ಮಾಡಿದ್ದು, ಈಗ ಮತ್ತೆ ೧ ಲಕ್ಷರೂ. ಪಾವತಿಸಿ ಇನ್ನೊಂದು ವರ್ಷಕ್ಕೆ ನವೀಕರಿಸಿದ್ದಾರೆ.
ವಿವಿಧ ಗಣ್ಯರಿಂದ ಪ್ರಾಣಿ, ಪಕ್ಷಿಗಳ ದತ್ತು ಸ್ವೀಕಾರ  
ಬೆಂಗಳೂರಿನ ಡಾ.ನರೇಂದ್ರ ವಿ. ಎಂಬುವವರು ೩೫ ಸಾವಿರರೂ. ಪಾವತಿಸಿ ಕಪ್ಪುಚಿರತೆ , ಡಾ.ಮಾರ್ಜೋರಿಎಂಬುವರು ೨೦ ಸಾವಿರರೂ. ಪಾವತಿಸಿ ಇಂಡಿಯನ್ ಗೇ ವುಲ್ಫ್, ವಿಶ್ವನಾಥ್‌ಎಸ್. ಅವರು ೫ ಸಾವಿರರೂ. ಪಾವತಿಸಿ ಲೆಪರ್ಡ್ಕ್ಯಾಟ್, ಮೈಸೂರಿನ ವನಜಾಕ್ಷಿ ಪಿ. ಎಂಬುವರು ೧೦ ಸಾವಿರರೂ. ಪಾವತಿಸಿ ಕಾಮನ್ ಆಸ್ಟ್ರಿಚ್, ಲಾವಣ್ಯ ಮೋಹನ್‌ಎಂಬುವರು ೧ ಸಾವಿರರೂ. ಪಾವತಿಸಿ ಬುಡ್ಜರಿಗಾರ್, ಸೌಮ್ಯಎಸ್. ಅವರು ೬,೫೦೦ ರೂ. ಪಾವತಿಸಿ ಕಾಕಟೈಲ್, ರಿವರ್‌ಟೆರ್ರಾಪಿನ್ ಮತ್ತು ಮಾನಿಟರ್ ಹಲ್ಲಿ, ಕ್ಷಿತಿಜ್ ಮತ್ತುಕ್ಷಮಯಎಂಬುವವರು ೭ ಸಾವಿರರೂ. ಪಾವತಿಸಿ ನೈಲು ಮತ್ತು ಕಾಳಿಂಗ ಸರ್ಪ, ಎನ್.ಸುರೇಶ್‌ಎಂಬುವರು ೫ ಸಾವಿರರೂ. ಪಾವತಿಸಿ ನಾಲ್ಕು ಕೊಂಬಿನ ಜಿಂಕೆ, ದಾವಣಗೆರೆಯಉಮಶಂಕರ್ ಎಂ. ಎಂಬುವವರು ೫ ಸಾವಿರರೂ. ಪಾವತಿಸಿ ಗ್ರೇಟ್‌ಇಂಡಿಯನ್ ಹಾನ್ರ‍್ಬಲ್‌ಅನ್ನುದತ್ತು ಪಡೆದಿದ್ದಾರೆ ಎಂದು ಚಾಮರಾಜೆಂದ್ರ ಮೃಗಾಲಯದಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss