Thursday, July 7, 2022

Latest Posts

ಮೈಸೂರು| ಹುಣಸೂರು ಕ್ಷೇತ್ರದ ಹಾಲಿ-ಮಾಜಿ ಶಾಸಕರ ನಡುವೆ ಮತ್ತೆ ವಾಕ್ಸಮರ

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರುಗಳ ನಡುವೆ ಮತ್ತೆ ವಾಕ್ಸಮರ ನಡೆದಿದೆ. ಎಂಎಲ್‌ಸಿ ವಿಶ್ವನಾಥ್ ಪುತ್ರ ತನ್ನನ್ನ ಕೊಲೆ ಮಾಡುವುದಾಗಿ ಪ್ರಚೋದನೆ ನೀಡಿದ್ದಾರೆ ಎಂದು ಹುಣಸೂರಿನ ಹಾಲಿ ಕಾಂಗ್ರೆಸ್ ಶಾಸಕ ಮಂಜುನಾಥ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಚ್. ವಿಶ್ವನಾಥ್, ಇದೆಲ್ಲ ಶುದ್ದ ಸುಳ್ಳು, ನನ್ನ ವಿರುದ್ಧ ಪಿತೂರಿ ನಡೆಸಿ ಆರೋಪಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಹುಣಸೂರು ತಾಲೂಕಿನ ಸಿದ್ದಯ್ಯನ ಕೊಪ್ಪಲು ಗ್ರಾಮದ ಪ್ರಕರಣದ ವಿಚಾರದಲ್ಲಿ ನನ್ನ ಮೇಲೆ ಹಲ್ಲೆ ಪಿತೂರಿ ನಡೆದಿದೆ. ನನ್ನ ಮೇಲೆ ಹಲ್ಲೆ ಮಾಡಲು ಎಚ್.ವಿಶ್ವನಾಥ್‌ರ ಪುತ್ರರಾದ ಜಿ.ಪಂ ಸದಸ್ಯ ಅಮಿತ್ ದೇವರಟ್ಟಿ ಪ್ರಚೋದನೆ ನೀಡಿದ್ದಾರೆ ಎಂದು ಶಾಸಕ ಮಂಜುನಾಥ್ ಆರೋಪ ಮಾಡಿದ್ದಾರೆ. ಇನ್ನು ಈ ವಿಚಾರವನ್ನು ಆಡಿಯೋದಲ್ಲಿ ರಮೇಶ್ ಎಂಬುವರು ಹೇಳಿದ್ದಾರೆ.
ನಮ್ಮ ಕ್ಷೇತ್ರದ ಮುಖಂಡರಾದ ರಮೇಶ್ ಹಾಗೂ ಪುಟ್ಟರಾಜು ನಡುವೆ ಈ ಸಂಭಾಷಣೆ ನಡೆದಿದೆ. ಅದನ್ನು ಆಧರಿಸಿ ನಾನು ಎಸ್‌ಪಿಗೆ ಲಿಖಿತ ದೂರು ಕೊಡಲಿದ್ದೇನೆ. ಎಚ್.ವಿಶ್ವನಾಥ್ ಎಂ.ಎಲ್.ಸಿ ಆದ ನಂತರ ಅಮಿತ್ ಆಟಾಟೋಪ ಜಾಸ್ತಿಯಾಗಿದೆ ನನ್ನ ವಿರುದ್ದ ಜನರನ್ನು ಎತ್ತಿ ಕಟ್ಟೋಕೆ ಶುರು ಮಾಡಿದ್ದಾರೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಆರೋಪಿಸಿದ್ದಾರೆ.
ನನ್ನ ಹೊಡೆಸೋಕೆ ಜನರನ್ನು ಎತ್ತಿ ಕಟ್ಟಿದ ಬಗ್ಗೆ ಆಡಿಯೋ ಬಹಿರಂಗವಾಗಿದೆ. ನನ್ನ ಕ್ಷೇತ್ರದಲ್ಲಿ ಈ ತನಕ ಇರದ ಕೆಳಮಟ್ಟದ ರಾಜಕೀಯಕ್ಕೆ ಅಮಿತ್ ನಾಂದಿ ಹಾಡಿದ್ದಾರೆ ಎಂದು ನಾನು ಕ್ಷೇತ್ರದ ಜನರಿಗಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈ ಬಗ್ಗೆ ಜಿಲ್ಲಾ ಮಂತ್ರಿ ಹಾಗೂ ಡಿಸಿಗೆ ದೂರು ಕೊಟ್ಟಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ.
ಎಂಎಲ್‌ಸಿ ಎಚ್.ವಿಶ್ವನಾಥ್ ತಿರುಗೇಟು
ಹಲ್ಲೆ ಪಿತೂರಿ ಬಗ್ಗೆ ಇರುವ ಆಡಿಯೋ ಫೇಕ್. ಇದೊಂದು ಬುಲ್‌ಶಿಟ್. ಇದೊಂದು ಸುಳ್ಳು ಕಂತೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ನನ್ನ ಮಗನ ಜೊತೆ ಮಾತನಾಡಿದ್ದೇನೆ. ಅವನು ನನಗೆ ಯಾವುದೇ ಸಂಬAಧ ಇಲ್ಲ ಅಂತ ಹೇಳಿದ್ದಾರೆ.
ಇದೆಲ್ಲ ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿ. ಎಂಎಲ್‌ಸಿ ಸ್ಥಾನ ಪಡೆಯುವ ವೇಳೆ ಎಲ್ಲರೂ ಒಂದಾಗಿ ನನ್ನ ವಿರುದ್ಧ ಪಿತೂರಿ ಮಾಡಿದ್ದರು. ಈಗ ವಿಶ್ವನಾಥ್ ಮಂತ್ರಿ ಆಗಬಹುದು ಅಂತ ಈ ರೀತಿ ಅಪ ಪ್ರಚಾರ ಮಾಡುತ್ತಿದ್ದಾರೆ. ಅಂತಹ ಯಾವುದೇ ವಿಚಾರ ಇದ್ದರೂ ಸೈಬರ್ ಠಾಣೆಗೆ ದೂರು ಕೊಡಲಿ.ಅಲ್ಲಿ ಇತ್ಯರ್ಥ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. ಅಲ್ಲದೆ ಶಾಸಕ ಮಂಜುನಾಥ್ ಒಬ್ಬ ಸುಳ್ಳುಗಾರ. ಅವನಿಗಿಂತ ದೊಡ್ಡ ರೌಡಿ ಯಾರು ಇಲ್ಲ ಅವನಿಗೆ ಯಾರು ಬೆದರಿಕೆ ಹಾಕುತ್ತಾರೆ, ಈ ರೀತಿ ಬೆದರಿಕೆ ಹಾಕಿದ್ದರೆ, ನನ್ನ ಬಳಿ ಹೇಳಬಹುದಿತ್ತು. ಆದರೆ ಅವರ ನನ್ನ ಬಳಿ ಏನು ಹೇಳಿಲ್ಲ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss