Saturday, August 13, 2022

Latest Posts

ಮೈಸೂರು| ಹೃದಯಾಘಾತದಿಂದ ಕೊರೋನಾ ವಾರಿಯರ್ ವೈದ್ಯ ಸಾವು

ಮೈಸೂರು: ಕೊರೋನಾ ಸಂಕಷ್ಟದ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಗಲಿರುಳು ಸೇವೆ ಸಲ್ಲಿಸಿದ್ದ ಕೊರೋನಾ ವಾರಿಯರ್ ವೈದ್ಯರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮೈಸೂರು ಜಿಲ್ಲೆ ಪಿರಿಯಪ್ಟಣ ತಾಲ್ಲೂಕು ವೈದ್ಯಾಧಿಕಾರಿ ಡಾ ನಾಗೇಶ್ ಮೃತಪಟ್ಟ ವೈದ್ಯ. ಮೃತ ಡಾ.ನಾಗೇಶ್ ಕೊರೋನಾ ಸಂಕಷ್ಟದಲ್ಲಿ ಹಗಲು ರಾತ್ರಿ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದರು. ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ದಿನೇ ದಿನೇ ಕೆಲಸದ ಒತ್ತಡ ಹೆಚ್ಚಾಗುತ್ತಿತ್ತು.
ಹೆಚ್ಚಿನ  ಒತ್ತಡ ಹಿನ್ನೆಲೆ ಇಂದು ಬೆಳಿಗ್ಗೆ ವೈದ್ಯಾಧಿಕಾರಿ ನಾಗೇಶ್ ಅವರಿಗೆ ಹೃದಯಘಾತವಾಗಿ ಮೃತಪಟ್ಟಿದ್ದಾರೆ. ಅವರು ಪತ್ನಿ ಹಾಗೂ ರ‍್ವ ಪುತ್ರನನ್ನ ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss