Wednesday, August 17, 2022

Latest Posts

ಮೈಸೂರು| 3.10 ಕೋಟಿ ರೂ. ವೆಚ್ಚ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ, ಸಚಿವರಿಂದ ಚಾಲನೆ

ಮೈಸೂರು: ಮೈಸೂರಿನ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕುಂಬಾರಕೊಪ್ಪಲು, ಆದಿಶಕ್ತಿ ದೇವಸ್ಥಾನದ, ೧ನೇ ಬಸ್ ನಿಲ್ದಾಣದ ಬಳಿಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ೩.೧೦ ಕೋಟಿ ರೂ ವೆಚ್ಚ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶುಕ್ರವಾರ ಚಾಲನೆ ನೀಡಿದರು.
ಕೆ.ಆರ್.ಎಸ್.ರಸ್ತೆಯಿಂದ ಕುಂಬಾರಕೊಪ್ಪಲು ಮಾರ್ಗ ಸೂರ್ಯಬೇಕರಿ ವರೆಗೆ ೨೪೦೦ ಮೀಟರ್ ಉದ್ದದ ಬಾಕ್ಸ್ ಕಾಂಕ್ರೀಟ್ ಚರಂಡಿ ನಿರ್ಮಾಣ, ೧೨೪೦ ಮೀಟರ್ ಉದ್ದದ ರಸ್ತೆ ಪುನರ್ ನಿರ್ಮಾಣ ಹಾಗೂ ೬೦೦ ಮೀಟರ್ ಉದ್ದದ ಜೋಡಿರಸ್ತೆ ಅಗಲೀಕರಣ, ಡಾಂಬರೀಕರಣ, ಕಾಮಗಾರಿ ಗುದ್ದಲಿಪೂಜೆ, ಕಾಮಗಾರಿಯ ವೆಚ್ಚ ರೂ. ೩.೧೦ ಕೋಟಿ ಗುದ್ದಲಿಪೂಜೆಯನ್ನು ನೆರವೇರಿಸಿದರು.
ಈ ಸಮಯದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡರವರು, ಮೈಸೂರು ಮಹಾನಗರ ಪಾಲಿಕೆಯ ಸದಸ್ಯರುಗಳಾದ ಉಷಾ ಕುಮಾರ್, ಕೆ.ವಿ.ಶ್ರೀಧರ್, ಸುಬ್ಬಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜು, ಚಾಮರಾಜ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಕುಮಾರಗೌಡ, ಕಾರ್ಯಕಾರಿಣಿ ಸದಸ್ಯ ಮಂಜಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಯುವಮೋರ್ಚಾ ಅಧ್ಯಕ್ಷ ಸಚಿನ್, ಜನಸ್ನೀಹಿ ಕೇಂದ್ರದ ನವೀನ್ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!