Wednesday, August 17, 2022

Latest Posts

ಮೊದಲ ಐಪಿಎಲ್ ಪಂದ್ಯ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163 ರನ್ ಗಳ ಗೆಲುವಿನ ಗುರಿ ನೀಡಿದ ಮುಂಬೈ ಇಂಡಿಯನ್ಸ್!

ಅಬುಧಾಬಿ: ಶನಿವಾರ ಅಬುಧಾಬಿಯ ಶೇಕ್​ ಜಾಯೇದ್​ ಸ್ಟೇಡಿಯಂನಲ್ಲಿ ನಡೆದ 2020ನೇ ಸಾಲಿನ ಐಪಿಎಲ್ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 163 ರನ್ ಗಳ ಗೆಲುವಿನ ಗುರಿ ನೀಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಧೋನಿ ಪಡೆ 20 ಓವರ್ ಗಳಲ್ಲಿ 162 ರನ್ ನೀಡಿ 9 ವಿಕೆಟ್ ಪಡೆಯಿತು.
ಮುಂಬೈ ಇಂಡಿಯನ್ಸ್ ಪರ ಸೌರಭ್ ತಿವಾರಿ 42 ರನ್ ಮತ್ತು ಕ್ವಿಂಟನ್ ಡಿ ಕಾಕ್ 33 ರನ್ ಗಳಿಸಿದರು. ಆರಂಭಿಕರಾಗಿನ ಕಣಕ್ಕಿಳಿದು ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿ ಎದುರಾಳಿಗೆ ಎಚ್ಚರಿಕೆ ನೀಡಿದ್ದ ನಾಯಕ ರೋಹಿತ್​ ಶರ್ಮಾ ಸ್ಪಿನ್ನರ್​ ಪಿಯುಷ್ ಚಾವ್ಲಾ ಓವರ್​​ನಲ್ಲಿ ಕೇವಲ 12 ರನ್​ಗಳಿಸಿ ಔಟಾದರು. ​ ಡಿಕಾಕ್​ 33 , ಸೂರ್ಯಕುಮಾರ್​ ಯಾದವ್​ 17 , ಹಾರ್ದಿಕ್ ಪಾಂಡ್ಯ 14, ಕೃನಾಲ್​ ಪಾಂಡ್ಯ 3 , ಕೀರನ್ ಪೊಲಾರ್ಡ್​ 18, ಜೇಮ್ಸ್​ ಪ್ಯಾಟಿನ್​ಸನ್​ 11, ಟ್ರೆಂಟ್​ ಬೌಲ್ಟ್​ 0 ಗೆ ವಿಕೆಟ್​ ಒಪ್ಪಿಸಿದರು.
ಒಟ್ಟಾರೆ 20 ಓವರ್​ಗಳಲ್ಲಿ ಮುಂಬೈ ಇಂಡಿಯನ್ಸ್​ 9 ವಿಕೆಟ್​ ನಷ್ಟಕ್ಕೆ 162 ರನ್​ಗಳಿಸಿದೆ.
ಸಿಎಸ್​ಕೆ ಪರ ಲುಂಗಿ ಎಂಗಿಡಿ 38ಕ್ಕೆ 3, ದೀಪಕ್​ ಚಹಾರ್​ 32ಕ್ಕೆ 2, ರವೀಂದ್ರ ಜಡೇಜಾ 42ಕ್ಕೆ 2 ಸ್ಯಾಮ್ ಕರನ್​ ಹಾಗೂ ಚಾವ್ಲಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!