ಹೊಸದಿಗಂತ ಆನ್ ಲೈನ್ ಡೆಸ್ಕ್:
ಸೌದಿ ಅರೇಬಿಯಾ ರಾಜ ಸಲ್ಮಾನ್ ಇಂದು ಕೊರೋನಾ ವೈರಸ್ ಲಸಿಕೆಯ ಮೊದಲ ಚುಚ್ಚುಮದ್ದು ಪಡೆದುಕೊಂಡಿದ್ದಾರೆ.
85 ವರ್ಷದ ಸಲ್ಮಾನ್ ಮೊದಲ ಚುಚ್ಚುಮದ್ದು ಪಡೆದುಕೊಂಡಿದ್ದಾಗಿ ಅಲ್ಲಿನ ಸುದ್ದಿವಾಹಿನಿ ಮಾಹಿತಿ ಪ್ರಕಟಿಸಿದ್ದು, ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಸೌದಿ ಅರೇಬಿಯಾದಲ್ಲಿ ಅಮೆರಿಕದಿಂದ ಸಿದ್ದಗೊಂಡಿರುವ ಫೈಜರ್ ಚುಚ್ಚುಮದ್ದು ನೀಡಲಾಗುತ್ತಿದೆ.
ಸೌದಿ ಅರೇಬಿಯಾ ದೊರೆ ಜತೆಗೆ ಅವರ ಸಹೋದರ ಫ್ರಿನ್ಸ್ ಖಾಲೀದ್ ಬಿಲ್ ಸಲ್ಮಾನ್ ಹಾಗೂ ಸೌದಿ ಸರ್ಕಾರದ ಅನೇಕ ಅಧಿಕಾರಿಗಳು ಈ ಚುಚ್ಚುಮದ್ದು ಪಡೆದುಕೊಂಡಿದ್ದಾರೆ.