Tuesday, August 16, 2022

Latest Posts

ಮೊದಲ ಕೊರೋನಾ ವ್ಯಾಕ್ಸಿನ್ ಪಡೆದು ಇತರರಿಗೆ ಮಾದರಿಯಾದ ಸಿಂಗಾಪುರ​ ಪ್ರಧಾನಿ!

ಹೊಸ ದಿಗಂತ ಆನ್ ಡೆಸ್ಕ್:

ಕೊರೋನಾ ಸೋಂಕಿನ ವಿರುದ್ಧ ವಿಶ್ವವೇ ಹೋರಾಡುತ್ತಿದ್ದು, ಈಗಾಗಲೇ ಲಸಿಕೆಗಳನ್ನು ನೀಡುವ ಪ್ರಕ್ರಿಯೆ ಎಲ್ಲೆಡೆ ಚಾಲ್ತಿಯಲ್ಲಿದೆ.
ಇದರ ನಡುವೆ ಸಿಂಗಾಪುರ​ ಪ್ರಧಾನಿ ತನ್ನ ದೇಶದಲ್ಲಿ ಮೊದಲ ವ್ಯಾಕ್ಸಿನ್ ಪಡೆದು ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಪ್ರಧಾನಿ ಲೀ ಹ್ಸೀನ್ ಲೂಂಗ್​ ಶುಕ್ರವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ ವ್ಯಾಕ್ಸಿನ್​​ ಫೈಜರ್ ಚುಚ್ಚುಮದ್ದು ತೆಗೆದುಕೊಂಡಿದ್ದಾರೆ. ಇದರ ಜತೆಗೆ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಅನೇಕರಿಗೆ ಈಗಾಗಲೇ ವ್ಯಾಕ್ಸಿನ್​ ನೀಡುವ ಕಾರ್ಯ ಆರಂಭಗೊಂಡಿದೆ.
ಲಸಿಕೆ ಪಡೆದುಕೊಂಡ ಮೇಲೆ ಮಾತನಾಡಿರುವ ಪ್ರಧಾನಿ, ಚುಚ್ಚುಮದ್ದು ನೋವುರಹಿತವಾಗಿದ್ದು, ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ. ಸಿಂಗಪುರದಲ್ಲಿ ವಾಸವಾಗಿರುವ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು ಎಂದು ಇದೇ ವೇಳೆ ಅವರು ಅಭಯ ನೀಡಿದರು.
ಫೈಜರ್ ಕೊರೋನಾ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಅನುಮೋದನೆ ನೀಡಿದೆ. ಭಾರತದಲ್ಲೂ ಈಗಾಗಲೇ ಎರಡು ಲಸಿಕೆಗಳ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss