Sunday, February 28, 2021

Latest Posts

ಮೊದಲ ಬಾರಿಗೆ ಹೀರೋ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ ಹಾಸ್ಯ ನಟ ಕುರಿ ಪ್ರತಾಪ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರತಿವಾರ ಕಿರುತೆರೆಯ ‘ಮಜಾ ಟಾಕೀಸ್’ ನಲ್ಲಿ ಕಾಣಿಸಿಕೊಂಡು, ಹೊಟ್ಟೆ ಹುಣ್ಣಾಗಿಸುವಂತೆ ನಕ್ಕು ನಗಿಸುವ ಹಾಸ್ಯ ನಟ ಕುರಿ ಪ್ರತಾಪ್ ಅವರಿಗೆ ಈಗ ಹೀರೋ ಆಗುವ ಸುದಿನ ಬಂದಿದೆ. ಈ ಹಾಸ್ಯ ನಟ ಚಿತ್ರವೊಂದಕ್ಕೆ ನಾಯಕನಾಗುತ್ತಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಹೀರೋ ಆಗಿ ತೆರೆಮೇಲೆ ಬರುತ್ತಿದ್ದಾರೆ.
ಈ ಚಿತ್ರಕ್ಕೆ ‘ಆರ್ ಸಿ ಬ್ರದರ್ಸ್’ ಎಂದು ನಾಮಕರಣ ಮಾಡಲಾಗಿದೆ. ಪ್ರಕಾಶ್ ಕುಮಾರ್ ಈ ಚಿತ್ರದ ನಿರ್ದೇಶಕರು. ‘ಆರ್ ಸಿ ಬ್ರದರ್ಸ್’ ಚಿತ್ರದಲ್ಲಿ ಕುರಿ ಪ್ರತಾಪ್ ಅವರ ಹಿರಿಯ ಸಹೋದರನ ಪಾತ್ರದಲ್ಲಿ ತಬಲಾ ನಾಣಿ ನಟಿಸಲಿದ್ದಾರೆ. ಇಲ್ಲಿ ತಬಲಾ ನಾಣಿಯವರದೂ ಕೂಡ ಮಹತ್ವದ ಪಾತ್ರ. ಅಣ್ಣ-ತಮ್ಮಂದಿರ ಬಾಂಧವ್ಯದ ಕುರಿತು ಕಥಾ ಹಂದರ ಹೊಂದಿರುವ ಈ ಸಿನಿಮಾ ಬರುವ ಮಾರ್ಚ್ ತಿಂಗಳಿನಲ್ಲಿ ಸೆಟ್ಟೇರಲಿದೆ.
ಇನ್ನು ತಾವು ನಾಯಕ ನಟನಾಗಿ ಬಡ್ತಿ ಪಡೆದುಕೊಳ್ಳುತ್ತಿರುವ ಬಗ್ಗೆ ಮಾತಾಡಿರುವ ಕುರಿ ಪ್ರತಾಪ್. ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ. ಸಾಮಾನ್ಯವಾಗಿ ಪೋಷಕ ಪಾತ್ರದಿಂದ ನಾಯಕ ಪಾತ್ರಕ್ಕೆ ಪ್ರಮೋಷನ್ ಪಡೆದ ನಟರು ಮತ್ತೆ ಚಿಕ್ಕಪುಟ್ಟ ಪಾತ್ರಗಳನ್ನು ನಿಭಾಯಿಸಲು ಹಿಂದೇಟು ಹಾಕುವುದುಂಟು. ಆದರೆ, ನಾನು ಅವರ ಸಾಲಿಗೆ ಸೇರುವುದಿಲ್ಲ. ಈ ಸಿನಿಮಾ ನಂತರವೂ ನಾನು ಪೋಷಕ ಪಾತ್ರಗಳಲ್ಲಿ ನಟಿಸುತ್ತೇನೆ ಎಂದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!