ಬೆಂಗಳೂರು: ಕೋವಿಡ್ ಕರ್ಫ್ಯೂಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ಸಂಪೂರ್ಣ ಸ್ತಬ್ಧವಾಗಿದ್ದು, ಅಗತ್ಯ ವಸ್ತುಗಳನ್ನು ಬಿಟ್ಟು ಬೇರೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ.
ಮೊದಲ ಭಾನುವಾರ ಕರ್ಫ್ಯೂ ಇದಾಗಿದ್ದು, ಬಸ್, ಆಟೋ, ರೈಲು ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ರಸ್ತೆಗಿಳಿದಿಲ್ಲ. ಖಾಸಗಿ ವಾಹನದಲ್ಲಿಯೂ ಜನರು ಸಂಚರಿಸಲು ಆಸಕ್ತಿ ವಹಿಸಿಲ್ಲ. ಲಾಕ್ ಡೌನ್ ಹಿನ್ನೆಲೆಯ್ಲಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮುಂಜಾನೆ ಬೆಂಗಳೂರು ನಗರದಲ್ಲಿ ವಾಕಿಂಗ್ಗೆ ಪಾರ್ಕ್ಗೆ ಬಂದವರನ್ನು ಪೊಲೀಸರು ವಾಪಸ್ ಕಳಿಸಿದ್ದಾರೆ. ನಗರದ ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು ಅನಗತ್ಯವಾಗಿ ಓಡಾಡುವ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಹಾಲು, ಔಷಧಿ, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಇಂದು ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 11 ಗಂಟೆಯ ತನಕ ಮೀನು, ಮಾಂಸ ಮಾರಾಟಕ್ಕೂ ಅನುಮತಿ ನೀಡಲಾಗಿತ್ತು.