Tuesday, June 28, 2022

Latest Posts

ಮೊದಲ ಹಂತದ ಗ್ರಾ.ಪಂ ಚುನಾವಣೆ: ಹಾಸನ ಜಿಲ್ಲೆಯಲ್ಲಿ ನಡೆಯಿತು ಶಾಂತಿಯುತ ಮತದಾನ

ಹೊಸ ದಿಗಂತ ವರದಿ, ಹಾಸನ:

ಜಿಲ್ಲೆಯಲ್ಲಿ ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.
ನಾಲ್ಕು ತಾಲೂಕುಗಳಲ್ಲಿ ಸಂಜೆ 5 ಗಂಟೆವರೆಗೆ ಒಟ್ಟಾರೆ ಶೇ.85.93 ರಷ್ಟು ಮತ ಚಲಾವಣೆ ಗೊಂಡಿದೆ.
ಹಾಸನ ತಾಲ್ಲೂಕಿನಲ್ಲಿ 84.72 ಸಕಲೇಶಪುರ ತಾಲ್ಲೂಕಿನಲ್ಲಿ 85.23% ಅರಕಲಗೂಡು 86.83% ಚನ್ನರಾಯಪಟ್ಟಣ ತಾಲೂಕುಗಳಲ್ಲಿ 86.94% ರಷ್ಟು ಮತದಾನವಾಗಿದೆ.
ಎಲ್ಲಾ ತಾಲ್ಲೂಕಿನಲ್ಲಿ ಮತದಾರರು ಬೆಳಿಗ್ಗೆಯಿಂದಲೇ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದರು.
ಎಲ್ಲಾ ಮತಗಟ್ಟೆಗಳಲ್ಲಿ ವಿಶೇಷ ಚೇತನರಿಗೆ ಹಾಗೂ ವಯೋವೃದ್ಧರಿಗೆ ಗಾಲಿ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು. ವಿಕಲ ಚೇತನರಿಗೆ ಜಿಲ್ಲಾಡಳಿತ ವತಿಯಿಂದಲೇ ಸಾರಿಗೆ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಅಶಕ್ತ ಮತದಾರರಿಗೆ ಆದ್ಯತೆ ಮೇರಿಗೆ ಮತ ಚಲಾಯಿಸಲು ಅವಕಾಶ ಒದಗಿಸಲಾಗಿತ್ತು. ಸಾಲಗಾಮೆ ಗ್ರಾಮದ ಮತಗಟ್ಟೆಯಲ್ಲಿ 96 ವರ್ಷದ ಸಿದ್ದಪ್ಪ ಅವರು ಗಾಲಿ ಕುರ್ಚಿ ಸಹಾಯದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು . 88 ವರ್ಷದ ವಯೋವೃದ್ಧೆ ಲಕ್ಷ್ಮಮ್ಮ ಅವರು ಕೆಲವತ್ತಿ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು ಇದೇ ರೀತಿ ನೂರಾರು ವಯೋವೃದ್ದರು , ವಿಕಲ ಚೇತನರು ಮತಚಲಾಯಿಸಿದರು.
ಮತಗಟ್ಟೆಗಳಿಗೆ ಆಗಮಿಸಿದ ಮತದಾರರನ್ನು ಸ್ಕ್ರೀನಿಂಗ್ ಮಾಡಿ ಮತಗಟ್ಟೆಗೆ ಬಿಡಲಾಯಿತು ಸ್ಯಾನಿಟೈಸರ್ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ ಚಲಾಯಿಸಿದರು.
ಹಲವು‌ ಮತಗಟ್ಟೆಗಳಲ್ಲಿ ಸಂಜೆ ನಾಲ್ಕುಗಂಟೆ ನಂತರ ಕೊವಿದ್ 19 ಸೋಂಕಿತರಿಗೆ ಪಿ.ಪಿ. ಕಿಟ್ ಧರಿಸಿ ಮತ ಚಲಾಯಿಸಲು ಅವಕಾಶ ನೀಡಲಾಯಿತು. ಸಕಲೇಶಪುರು ತಾಲ್ಲೂಕಿನ ಬಾಳ್ಳಪೇಟೆಯ ಪ್ರದೀಪ್ ಸೇರಿದಂತೆ ಹಲವರು ಪಿ.ಪಿ‌ ಕಿಟ್ ಧರಿಸಿ ಮತದಾನ‌ ಮಾಡಿದರು.
ಜಿಲ್ಲೆಯಲ್ಲಿ ನಾಲ್ಕು ತಾಲ್ಲೂಕುಗಳಲ್ಲಿ ಬೆಳಿಗ್ಗೆ 9 ರವರೆಗೆ ಹಾಸನ ತಾಲ್ಲೂಕಿನಲ್ಲಿ ಶೇ.10.19 ರಷ್ಟು, ಮತದಾನವಾಗಿದೆ.ಅರಕಲಗೂಡು ತಾಲ್ಲೂಕಿನಲ್ಲಿ ಶೇ.8.63 ರಷ್ಟು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.10.09 ರಷ್ಟು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.11.27 ರಷ್ಟು ಮತದಾನವಾಗಿತ್ತು.
ಇದೇ ರೀತಿ ಬೆಳಗ್ಗೆ 11 ರವರೆಗೆ ಹಾಸನ ತಾಲ್ಲೂಕಿನಲ್ಲಿ ಶೇ.28.79 ರಷ್ಟು, ಅರಕಲಗೂಡು ತಾಲ್ಲೂಕಿನಲ್ಲಿ ಶೇ.25.80 ರಷ್ಟು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.27.61 ರಷ್ಟು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.29.69 ರಷ್ಟು ಮತ ಚುನಾವಣೆಗೊಂಡಿದೆ.
ಮಧ್ಯಾಹ್ನ 1 ಗಂಟೆವರಗೆ ಹಾಸನ ತಾಲ್ಲೂಕಿನಲ್ಲಿ ಶೇ.52.53 ರಷ್ಟು, ಅರಕಲಗೂಡು ತಾಲ್ಲೂಕಿನಲ್ಲಿ ಶೇ.43.73 ರಷ್ಟು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.52.21 ರಷ್ಟು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.50.38 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು .
ಸಂಜೆ 3 ರವರೆಗೆ ಹಾಸನ ತಾಲ್ಲೂಕಿನಲ್ಲಿ ಶೇ.69.53 ರಷ್ಟು, ಅರಕಲಗೂಡು ತಾಲ್ಲೂಕಿನಲ್ಲಿ ಶೇ.70.70 ರಷ್ಟು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಶೇ.72.18 ರಷ್ಟು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಶೇ.64.60 ರಷ್ಟು ಮತದಾನವಾಗಿತ್ತು.
ಸಂಜೆ 5 ಗಂಟೆ ವೇಳೆಗೆ ಹಾಸನ ತಾಲ್ಲೂಕಿನಲ್ಲಿ 84.72 ಅರಕಲಗೂಡು ತಾಲ್ಲೂಕಿನಲ್ಲಿ ಶೇ 86.83
ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 86.94, ಸಕಲೇಶಪುರ ತಾಲ್ಲೂಕಿನಲ್ಲಿ 85.23 ಮತದಾನವಾಯಿತು.
ಜಿಲ್ಲೆಯಲ್ಲಿ ಅರಕಲಗೂಡು ತಾಲ್ಲೂಕಿನಲ್ಲಿ 254, ಚನ್ನರಾಯಪಟ್ಟಣ 315, ಹಾಸನ ತಾಲ್ಲೂಕಿನಲ್ಲಿ 208 ಹಾಗೂ ಸಕಲೇಶಪುರ ತಾಲ್ಲೂಕಿನ 119 ಸೇರಿದಂತೆ 896 ಮತಗಟ್ಟೆಗಳಲ್ಲಿ ಇಂದು ಮತದಾನ ನಡೆದಿದ್ದು 1470 ಸದಸ್ಯ ಸ್ಥಾನಗಳಿಗೆ 3867 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss