Friday, August 12, 2022

Latest Posts

ಮೊಬೈಲ್, ಕಂಪ್ಯೂಟರ್ ನೋಡಿ ಕಣ್ಣು ಉರಿ, ನೋವು ಬರುತ್ತಿದೆಯೇ? ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ…

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಂಪ್ಯೂಟರ್ ಬಳಸುವುದು ಅನಿವಾರ್ಯವಾಗಿದೆ. ದಿನಿವಿಡೀ ಮೊಬೈಲ್, ಕಂಪ್ಯೂಟರ್ ಲ್ಯಾಪ್‌ಟಾಪ್ ನೋಡುವುದರಿಂದ ಕಣ್ಣುನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣುನೋವು ಹೆಚ್ಚಾದರೆ ತಲೆನೋವು ಸಹ ಬರುತ್ತದೆ. ಕಣ್ಣಿನಲ್ಲಿ ಉರಿ ಆಯಾಸವಾದ ಅನುಭವವಾಗುತ್ತದೆ. ಇಂತಹ ಕಣ್ಣು ಉರಿ ನಿವಾರಣೆಗೆ ಇಲ್ಲೊಂದಿಷ್ಟು ಮನೆ ಮದ್ದುಗಳಿವೆ. ಇದನ್ನು ಫಾಲೋ ಮಾಡಿ..

  • ಕಣ್ಣಿನ ನೋವು ಹೆಚ್ಚಾದಾಗ ಸೌತೆಕಾಯಿಯನ್ನು ಚಿಕ್ಕ ಚಿಕ್ಕ ಗಾಲಿಗಳನ್ನು ಮಾಡಿಕೊಂಡು ಅದನ್ನು ಫ್ರಿಡ್ಜ್‌ನಲ್ಲಿ ಇಡಿ. ಅದು ತಣ್ಣಗಾದ ನಂತರ ಅದನ್ನು ೧೦ ನಿಮಿಷ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಕಣ್ಣುನೋವು ಕಡಿಮೆ ಆಗುತ್ತದೆ.
  • ಆಲೂಗಡ್ಡೆಯ ರಸವನ್ನು ತೆಗೆದು ಆ ರಸವನ್ನು ಫ್ರಿಡ್ಜ್‌ನಲ್ಲಿ ಇಡಿ. ತಣ್ಣಗಾದ ನಂತರ ಕಣ್ಣಿನ ಸುತ್ತ ಮತ್ತು ಕಣ್ಣಿನ ಮೇಲೆ ಹಚ್ಚಿಕೊಂಡರೆ ಕಣ್ಣು ನೋವು ಕಡಿಮೆ ಆಗುತ್ತದೆ.
  • ನೀರಿಗೆ ಉಪ್ಪನ್ನು ಹಾಕಿ ಆನಂತರ ಅದನ್ನು ಕುದಿಸಿ. ಕುದಿಸಿದ ನೀರಿನಲ್ಲಿ ಬಟ್ಟೆಯನ್ನು ಅದ್ದಿ. ಆನಂತರ ಅದ್ದಿದ ಬಟ್ಟೆಯನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಹೀಗೆ ಮಾಡಿದರೆ ಕಣ್ಣಿನ ಉರಿ ಕಡಿಮೆ ಆಗುತ್ತದೆ. ಕಣ್ಣಿ ಉರಿ ಕಾಣಿಸಿಕೊಂಡಾಗಲೆಲ್ಲಾ ಇದನ್ನು ಮಾಡಬಹುದು.
  • ಹಾಲಿನ ಕೆನೆಯನ್ನು ಕಣ್ಣಿನ ಮೇಲೆ ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೂ ಕಣ್ಣಿನ ಉರಿ ಕಡಿಮೆ ಆಗುತ್ತದೆ.
  • ರಾತ್ರಿ ಮಲಗುವಾಗ ಕಣ್ಣಿಗೆ ರೋಸ್‌ವಾಟರ್ ಹಚ್ಚಿಕೊಂಡು ಮಲಗಿ. ಬೆಳಿಗ್ಗೆ ಐಸ್‌ಕ್ಯೂಬ್‌ನಿಂದ ಕಣ್ಣನ್ನು ಮಸಾಜ್ ಮಾಡಿಕೊಳ್ಳಿ. ಕಣ್ಣಿ ನೋವು ನಿವಾರಣೆಯಾಗುತ್ತದೆ. ಉರಿ ಕೂಡ ಕಡಿಮೆ ಆಗುತ್ತದೆ.
  • ದಾಳಿಂಬೆ ಹಣ್ಣಿ ಎಲೆಯನ್ನು ಜಜ್ಜಿ ಅದನ್ನು ಕಣ್ಣಿನ ಮೇಲೆ ೧೦ ನಿಮಿಷ ಇಟ್ಟುಕೊಳ್ಳಿ. ಕಣ್ಣಿನ ನೋವು ಕಡಿಮೆ ಆಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss