ಹೊಸದಿಗಂತ ಆನ್ ಲೈನ್ ಡೆಸ್ಕ್:
ಈಗಿನ ಮಕ್ಕಳಿಗೆ ಪೋಷಕರು ಒಂದು ಮಾತು ಬುದ್ಧಿ ಹೇಳಿದರೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಆಡುತ್ತಾರೆ. ತಪ್ಪು ದಾರಿ ಹಿಡಿಯುತ್ತಿರುವ ಯುವಕರಿಗೆ ಪೋಷಕರು ಬುದ್ಧಿ ಹೇಳುವುದು ಜವಾಬ್ದಾರಿಯಾದರೆ, ಅದನ್ನು ಅರ್ಥೈಸಿಕೊಂಡು ಬದುಕುವುದು ಮಕ್ಕಳ ಜವಾಬ್ದಾರಿ. ಆದರೆ ಹುಣಸವಳ್ಳಿ ಗ್ರಾಮದ ಯುವಕನಿಗೆ ಪೋಷಕರು ಮೊಬೈಲ್ ಬಳಸುವುದು ಕಡಿಮೆ ಮಾಡು ಎಂದ ಮಾತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಾ, ಪ್ರೀತಿಯಲ್ಲಿ ಮುಳುಗಿದ್ದ ಗಣಪತಿ ಎಂಬ ಯುವಕನಿಗೆ ಪೋಷಕರು ಇದು ಪ್ರೀತಿ ಪ್ರೇಮದ ವಯಸ್ಸಲ್ಲಾ, ಮೊಬೈಲ್ ನೋಡುವುದ ಕಡಿಮೆ ಮಾಡು ಎಂದು ಬುದ್ಧಿ ಮಾತು ಹೇಳಿದ್ದಾರೆ.
ಬಳಿಕ ಪೋಷಕರ ಮಾತಿಗೆ ನೊಂದ ಯುವಕ ಮೊಬೈಲ್ ರೀಚಾರ್ಜ್ ಮಾಡಿಸಿ ಬರುವೆನೆಂದು ತೆರಳಿ ನಾಪತ್ತೆಯಾಗಿದ್ದನು. ಬಳಿಕ ಅವನು ಮಡವಳ್ಳಿ ಗ್ರಾಮದ ಅಂಗನವಾಡಿ ಬಳಿ ಇರುವ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ.
ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.