ಹೊಸದಿಲ್ಲಿ: ರಾಷ್ಟ್ರೀಯ ಕಾಮಧೇನು ಸಂಘದ ಅಧ್ಯಕ್ಷ ವಲ್ಲಭಭಾಯಿ ಕಠಾರಿಯಾ ಅವರು ಹಸುವಿನ ಸೆಗಣಿಯಿಂದ ತಯಾರಿಸಿದ ಚಿಪ್ ಅನ್ನು ಅನಾವರಣಗೊಳಿಸಿದ್ದಾರೆ.
ಈ ಚಿಪ್ ಮೊಬೈಲ್ ಹ್ಯಾಂಡ್ ಸೆಟ್ ಗಳಿಂದ ಬರುವ ವಿಕಿರಣವನ್ನು ಇದು ಕಡಿಮೆ ಮಾಡುತ್ತದೆ ಮತ್ತು ಇದು ರೋಗಗಳ ವಿರುದ್ಧ ರಕ್ಷಣೆ ಯನ್ನು ನೀಡಲಿದೆ ಎಂದು ಹೇಳಿದ್ದಾರೆ.
ದೇಶದಾದ್ಯಂತ ಕಾಮಧೇನು ದೀಪಾವಳಿ ಅಭಿಯಾನವನ್ನು ಆಯೋಗ ಹಮ್ಮಿಕೊಂಡಿದೆ. ಹಸುವಿನ ಸೆಗಣಿಯಿಂದ ಮಾಡಿದ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಈ ಅಭಿಯಾನದ ಆಶಯವಾಗಿದೆ.
‘ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ. ಇದು ವಿಕಿರಣ ವಿರೋಧಿಯಾಗಿದ್ದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೊಂದು ರೇಡಿಯೇಷನ್ ಚಿಪ್ ಆಗಿದ್ದು, ಮೊಬೈಲ್ ಫೋನ್ಗಳ ರೇಡಿಯೇಷನ್ ತಡೆಯಲು ಇವನ್ನು ಮೊಬೈಲ್ನಲ್ಲಿ ಬಳಸಬಹುದು. ಖಾಯಿಲೆಗಳಿಂದಲೂ ಇದು ರಕ್ಷಿಸಲಿದೆ,’ ಎಂದು ಹೇಳಿದ್ದಾರೆ.
ಈ ಚಿಪ್ಗೆ ‘ಗೋಸತ್ವ ಕವಚ್’ ಎಂದು ಹೆಸರಿಡಲಾಗಿದ್ದು, ರಾಜಕೋಟ್ ಮೂಲದ ಶ್ರೀಜಿ ಗೋಶಾಲೆ ಇದನ್ನು ತಯಾರಿಸಿದೆ.ಈ ಕಾಮಧೇನು ಆಯೋಗ ಸಗಣಿಗೆ ಸಂಬಂಧಿಸಿದ ಉತ್ಪನ್ನಗಳ ಪ್ರಚಾರಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಅಭಿಯಾನವನ್ನು ಆರಂಭಿಸಿದೆ.
#WATCH: Cow dung will protect everyone, it is anti-radiation… It's scientifically proven…This is a radiation chip that can be used in mobile phones to reduce radiation. It'll be safeguard against diseases: Rashtriya Kamdhenu Aayog Chairman Vallabhbhai Kathiria (12.10.2020) pic.twitter.com/bgr9WZPUxK
— ANI (@ANI) October 13, 2020