ಹೊಸ ದಿಗಂತ ವರದಿ, ಶಿವಮೊಗ್ಗ:
ಶಿವಮೊಗ್ಗ ನಗರದ ಹರಕೆರೆಯಲ್ಲಿನ ತುಂಗಾ ಏತ ನೀರಾವರಿ ಕಚೇರಿ ಬಳಿ ಕಾಣಿಸಿಕೊಂಡಿದ್ದ ನಾಗರ ಹಾವು, ಅಲ್ಲಿ ಸಾಕಿದ್ದ ಮೊಲದ ಮರಿಗಳನ್ನು ತಿಂದು ಹಾಕಿರುವ ಘಟನೆ ನಡೆದಿದೆ.
ಅಲ್ಲಿದ್ದ ಸಿಬ್ಬಂದಿ ತಕ್ಷಣ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಕಿರಣ್ ಅಲ್ಲಿ ಹೋಗಿ ನೋಡಿದಾಗ ನಾಗರ ಹಾವು ಮೂರು ಮೊಲದ ಮರಿಗಳನ್ನು ನುಂಗಿರುವುದು ಕಂಡುಬಂತು. ಜೊತೆಗೆ ತಾಯಿ ಮೊಲ ಸೇರಿದಂತೆ ನಾಲ್ಕು ಮರಿಗಳನ್ನು ಕಚ್ಚಿ ಸಾಯಿಸಿತ್ತು. ಕಚೇರಿಯಲ್ಲಿ ಒಟ್ಟು 10 ಮೊಲಗಳನ್ನು ಸಾಕಲಾಗಿತ್ತು.
ಬಳಿಕ ಸ್ನೇಕ್ ಕಿರಣ್ ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.