Thursday, July 7, 2022

Latest Posts

ಮೊಹಮ್ಮದ್ ಅಜಮ್ ಖಾನ್ ವಕ್ ಆಸ್ತಿ ಸಂಖ್ಯೆ 157 ರ ಮುತಾವಲ್ಲಿಯಿಂದ ವಜಾ: ಸ್ವಾಧಿನಪಡಿಸಿಕೊಂಡಿದ್ದ ಜಮೀನು ಬಡವರಿಗೆ

ರಾಮ್‌ಪುರ್: ಕೇಂದ್ರೀಯ ಸುನ್ನಿ ವಕ್ ಮಂಡಳಿಯು, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ವಿವಾದಾತ್ಮಕ ನಾಯಕ ಮೊಹಮ್ಮದ್ ಅಜಮ್ ಖಾನ್ ಅವರನ್ನು ವಕ್ ಆಸ್ತಿ ಸಂಖ್ಯೆ 157 ರ ಮುತಾವಲ್ಲಿಯಿಂದ ವಜಾಗೊಳಿಸಿ 2016ರಲ್ಲಿ ಅವರು ಸ್ವಾಧಿನಪಡಿಸಿಕೊಂಡಿದ್ದ ಜಮೀನನ್ನು ಬಡವರಿಗೆ ಹಂಚಿದೆ. ಈ ಮೂಲಕ ಮುಸ್ಲಿಮರನ್ನು ಬಳಸಿಕೊಂಡು ಅಲ್ಪಸಂಖ್ಯಾತವಾದದ ರಾಜಕೀಯ ಮಾಡುತ್ತಿದ್ದ ಅಜಮ್ ಖಾನ್ ಈಗ ತೀವ್ರ ಮುಜುಗರಕ್ಕೀಡಾಗುವಂತಾಗಿದೆ.
ಉತ್ತರಪ್ರದೇಶದ ರಾಮ್‌ಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಅಜಮ್ ಖಾನ್ ಅವರನ್ನು ಸ್ಥಾನದಿಂದ ತೆಗೆದುಹಾಕಿದ ನಂತರ, ವಕ್ ಮಂಡಳಿಯು ಅವರ ಸ್ಥಾನಕ್ಕೆ ಆಡಳಿತಾಕಾರಿಯನ್ನು ನೇಮಕ ಮಾಡಿ, ಆ ಜಮೀನನ್ನು 26 ಬಡ ಕುಟುಂಬಗಳಿಗೆ ಮರು ಹಂಚಿಕೆ ಮಾಡಿದೆ.ಮಂಡಳಿಯು ಮಾ.೩೧ರಂದೇ ಈ ನಿರ್ಧಾರ ಕೈಗೊಂಡಿತ್ತಾದರೂ ಗುರುವಾರ ಸಾರ್ವಜನಿಕವಾಗಿ ಪ್ರಕಟಿಸಲಾಯಿತು.
ಸದಾ ಮುಸ್ಲಿಮರ ಹೆಸರಿನಲ್ಲಿ , ಅಲ್ಪಸಂಖ್ಯಾತವಾದದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದ ಅಜಂ ಖಾನ್, 2016 ರಲ್ಲಿ 26 ಬಡ ಕುಟುಂಬಗಳು ವಾಸಿಸುತ್ತಿದ್ದ ವಕ್ ಆಸ್ತಿ ಸಂಖ್ಯೆ 157 ರ ಮುತಾವಲ್ಲಿ ಆಗಿ ನೇಮಕಗೊಂಡಿದ್ದರು. ಅಲ್ಲಿದ್ದ ಬಡ ಕುಟುಂಬಗಳನ್ನು ಅಲ್ಲಿಂದ ಹೊರಹಾಕಲಾಗಿತ್ತು. ಅಲ್ಲದೆ, ಇಡೀ ಪ್ರದೇಶವನ್ನು ನೆಲಸಮ ಮಾಡಿ, ಅಲ್ಲಿ ಅಜಮ್ ಖಾನ್ ಇಂಗ್ಲಿಷ್ ಮಧ್ಯಮ ಶಾಲಾ ಕಟ್ಟಡ ನಿರ್ಮಿಸಿದ್ದರು. ಇದೀಗ ಈ ಕಟ್ಟಡವನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ಖಾನ್ ಪತ್ನಿ ಶಾಸಕಿ ತಾಂಜಿಮ್ ಫಾತಿಮಾ ಕೂಡಾ ಮಗನ ಪಾಸ್‌ಪೋರ್ಟ್‌ನಲ್ಲಿ ಹುಟ್ಟಿದ ದಿನಾಂಕವನ್ನು ನಕಲಿ ಮಾಡಿದ ಆರೋಪಕ್ಕೆ ಸಂಬಂಸಿ ಈಗ ಮಗನ ಸಹಿತವಾಗಿ ಜೈಲು ಸೇರಿರುವುದನ್ನು ಇಲ್ಲಿ ಸ್ಮರಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss