Wednesday, August 10, 2022

Latest Posts

ಮೊಹರಂ ಹಬ್ಬದ ಮೆರವಣಿಗೆ ಬೇಡ ಎಂದ ಸುಪ್ರೀಂ ಕೋರ್ಟ್: ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ!

ನವದೆಹಲಿ: ಕೊರೋನಾ ವೈರಸ್ ದೇಶದೆಲ್ಲೆಡೆ ಹರಡುತ್ತಿರುವ ಈ ಸಂದರ್ಭದಲ್ಲಿ ಮೊಹರಂ ಹಬ್ಬದ ಮೆರವಣಿಗೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನಿರಾಕರಿಸಿದೆ.
ಮೊಹರಂ ಮೆರವಣಿಗೆಗಳನ್ನ ನಡೆಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ವಿಷಯದಲ್ಲಿ ಇಡೀ ದೇಶಕ್ಕೆ ಸಾಮಾನ್ಯ ನಿರ್ದೇಶನ ಅನ್ವಯವಾಗುತ್ತೆ ಎಂದು ಸ್ಪಷ್ಟವಾಗಿ ತಿಳಿಸಿದೆ.
ಸಿಜೆಐ ಎಸ್‌ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯುನ್ ಅವರ ನ್ಯಾಯಪೀಠವು ” ದೇಶಾದ್ಯಂತ ಮೆರವಣಿಗೆಯನ್ನು ನಡೆಸಲು ಅನುಮತಿ ಕೊಟ್ಟರೆ ಅವ್ಯವಸ್ಥೆಗೆ ಉಂಟಾಗಲಿದೆ ಮತ್ತು ನಿರ್ದಿಷ್ಟ ಸಮುದಾಯವನ್ನು ಕೋವಿಡ್‌ ಹರಡಿದ ಕಾರಣಕ್ಕೆ ಗುರಿಯಾಗಿಸಲಾಗುತ್ತದೆ ಹಾಗಾಗುವುದು ಬೇಡ” ಎಂದು ಅಭಿಪ್ರಾಯಪಟ್ಟರು.
ಈ ಮೆರಣಿಗೆಯಿಂದ ಒಂದು ನಿರ್ದಿಷ್ಟ ಸಮುದಾಯವನ್ನ ಕೋವಿಡ್ -19 ಹರಡಲು ಗುರಿಯಾಗಿಯಾಗಿಸಿದಂತೆ ಆಗುತ್ತೆ. ನಮಗದು ಬೇಡ. ಮೆರವಣಿ ನಡೆಸಿದ್ರೆ, ಇಡೀ ದೇಶವೇ ತೊಂದರೆಗೊಳಗಾಗಬಹುದು ಎಂದು ನ್ಯಾಯಪೀಠ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss