Monday, July 4, 2022

Latest Posts

ಮೋದಿ ಕನಸಿನ ಕೂಸಿನ ಮೊದಲ ಅಧಿಕೃತ ಫೋಟೋ ಹಂಚಿಕೊಂಡ ಜಪಾನ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪ್ರಧಾನಿ ಮೋದಿ ಅವರ ಕನಸಿನ ಜಪಾನ್‌ನ ಬುಲೆಟ್ ಟ್ರೈನ್ ಎಂದೂ ಕರೆಯಲ್ಪಡುವ ‘ಇ5 ಸೀರಿಸ್​ ಶಿಂಕಾನ್‌ಸೆ’ನ್ ಅನ್ನು ಮುಂಬೈ- ಅಹಮದಾಬಾದ್ ಹೈ – ಸ್ಪೀಡ್ ರೈಲು ಯೋಜನೆಯ (ಎಂಎಎಚ್‌ಎಸ್ಆರ್) ರೋಲಿಂಗ್ ಸ್ಟಾಕ್ ಆಗಿ ಬಳಸಲು ಮಾರ್ಪಡಿಸಲಾಗುವುದು ಎಂದು ಜಪಾನಿನ ರಾಯಭಾರ ಕಚೇರಿ ತಿಳಿಸಿದೆ.
ಈ ಕುರಿತು ಭಾರತದ ಜಪಾನ್ ರಾಯಭಾರ ಕಚೇರಿಯು ಮೊದಲ ಅಧಿಕೃತ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಯೋಜನೆಯು 2023ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಇರಿಸಿಕೊಂಡಿದೆ.
ಈಗಾಗಲೇ ಈ ಯೋಜನಗೆಗೆ ಕೇಂದ್ರ ಸರಕಾರ ಅನುಮತಿ ನೀಡಿದ್ದು, ಸುಮಾರು 1,08,000 ಕೋಟಿ ರೂ. ಖರ್ಚು ಆಗುವ ನಿರೀಕ್ಷೆವಿದೆ. ಇನ್ನು ಜಪಾನ್ ಸರ್ಕಾರದ ಆರ್ಥಿಕ ಮತ್ತು ತಾಂತ್ರಿಕ ನೆರವಿನೊಂದಿಗೆ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಚ್ಎಸ್ಆರ್​ಸಿಎಲ್) ಕಾರ್ಯಗತಗೊಳಿಸುತ್ತಿದೆ.
ಬುಲೆಟ್ ರೈಲು ಯೋಜನೆಗೆ ಬೇಕಾದ ಶೇ 67ರಷ್ಟು ಭೂಮಿಯನ್ನು ರೈಲ್ವೆ ಪಡೆದುಕೊಂಡಿದೆ. ಗುಜರಾತ್‌ ವ್ಯಾಪ್ತಿಯ 956 ಹೆಕ್ಟೇರ್‌ನಲ್ಲಿ 825 ಹೆಕ್ಟೇರ್ ಭೂಮಿ ಸ್ವಾಧೀನವಾಗಿದ್ದು, ಶೇ 86ರಷ್ಟು ಪೂರ್ಣಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss