Wednesday, August 10, 2022

Latest Posts

ಮೋದಿ ಕಾಳಜಿಗೆ ಭಾವುಕರಾದ ಮುಖ್ಯಮಂತ್ರಿ ಯಡಿಯೂರಪ್ಪ!

ಹೊಸದಿಲ್ಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ದಿಲ್ಲಿ ಪ್ರವಾಸದ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ವೇಳೆ , ಪ್ರಧಾನಿಯವರು ತಮ್ಮ ಆರೋಗ್ಯ ಬಗ್ಗೆ ಕಾಳಜಿ ಹೊಂದಿ, ತಮ್ಮ ಕಠಿಣ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ ಯಡಿಯೂರಪ್ಪ ಭಾವುಕರಾದ ಘಟನೆ ನಡೆದಿದೆ.
‘ಕಾಡಿಬೇಡಿ ಭೇಟಿ ’ಎಂದೆಲ್ಲ, ವಿರೋಧಿ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರ ಮತ್ತು ಯಡಿಯೂರಪ್ಪ ಅವರ ನಡುವೆ ಕಂದಕ ಸೃಷ್ಟಿಸಲು ಕೆಲವು ಹೇಳಿಕೆಗಳನ್ನು ನೀಡುತ್ತಿರುವ ನಡುವೆಯೇ, ಯಡಿಯೂರಪ್ಪ ಅವರು ಪ್ರಧಾನಿಯವರನ್ನು ಭೇಟಿ ಮಾಡಿದ್ದರು. ತಮಗೆ ಸುಲಲಿತ ಭೇಟಿಗೆ ಅವಕಾಶವಿತ್ತ ಪ್ರಧಾನಿಯವರು ಆತ್ಮೀಯವಾಗಿ ಕುಶಲೋಪರಿ ಸಹಿತ ಮಾತುಕತೆ ನಡೆಸಿದ್ದು ಮುಖ್ಯಮಂತ್ರಿಯವರಲ್ಲಿ ಇನ್ನಷ್ಟು ಸಂತಸವನ್ನುಂಟು ಮಾಡಿದೆ. ಇಷ್ಟೇ ಅಲ್ಲದೆ ಸ್ವತಃ ಕೋವಿಡ್-೧೯ಸೋಂಕಿಗೆ ಸಿಲುಕಿದರೂ ದಣಿವರಿಯದೆ ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಿರುವ ಯಡಿಯೂರಪ್ಪ ಅವರ ಬಗ್ಗೆ ಪ್ರಧಾನಿ ಮೋದಿಯವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರವಾಹ, ಕೋವಿಡ್-೧೯ ಸೇರಿದಂತೆ ಸವಾಲುಗಳನ್ನು ಎದುರಿಸುವಲ್ಲಿ ನಿಮ್ಮ ಕಠಿಣ ದುಡಿಮೆ ಇತರರಿಗೆ ಪ್ರೇರಣಾದಾಯಿ. ಆದರೆ ಇದೇ ವೇಳೆ ನಿಮ್ಮ ಆರೋಗ್ಯ ಬಗ್ಗೆ ಕಾಳಜಿವಹಿಸಿಕೊಳ್ಳಿ. ಹೆಚ್ಚು ಹೆಚ್ಚು ವರ್ಚುವಲ್ ಸಭೆಗಳನು ನಡೆಸಿ, ಇ-ಆಡಳಿತಕ್ಕೆ ಒತ್ತು ನೀಡಿ. ಸಚಿವರನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಪ್ರಧಾನಿಯವರು ತಮ್ಮ ಬಗ್ಗೆ ತೋರಿದ ಈ ಪರಿಯ ಕಾಳಜಿಯಿಂದ ಮನತುಂಬಿದ ಬಿಎಸ್‌ವೈ ಇದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss