ನ್ಯೂಯಾರ್ಕ್: ನರೇಂದ್ರ ಮೋದಿಯವರನ್ನು ಸದಾ ಟೀಕಿಸುತ್ತಿದ್ದ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಇದೀಗ ಕೋವಿಡ್-19 ಬಿಕ್ಕಟ್ಟು ನಿಭಾವಣೆಯಲ್ಲಿ ಮೋದಿಯವರನ್ನು ಶ್ಲಾಘಿಸಿದೆ. ಮೋದಿಯವರ ಸಮರ್ಥ ನಿರ್ವಹಣೆಯಿಂದಾಗಿ ದೇಶದಲ್ಲಿ ಅವರ ಜನಪ್ರಿಯತೆಯು ಹೆಚ್ಚಿದೆ ಎಂದು ಪತ್ರಿಕೆಯು ಬರೆದಿದೆ.
ಈಗಾಗಲೆ ಭಾರತದಲ್ಲಿ ಜನಪ್ರಿಯರಾಗಿರುವ ಮೋದಿಯವರನ್ನು ಮೆಚ್ಚುವವರ ಸಂಖ್ಯೆಯು ಈಗಂತೂ ಶೇ. 80ನ್ನು ಹಾಗೂ ಕೆಲವೊಮ್ಮೆ ಶೇ.90ನ್ನು ತಲುಪಿದೆ ಎಂದು ಪತ್ರಿಕೆ ಹೇಳಿದೆ.
ಇದಕ್ಕೆ ವಿರುದ್ಧವಾಗಿ ಅಮೆರಿಕದಲ್ಲಿ ಅಧ್ಯಕ್ಷ ಟ್ರಂಪ್ ಹಾಗೂ ರಶ್ಯಾದಲ್ಲಿ ಪುತಿನ್ ಅವರ ಜನಪ್ರಿಯತೆ ತುಂಬಾ ಕುಸಿದಿದೆ ಎಂದು ಪತ್ರಿಕೆ ಬರೆದಿದೆ. ಈ ಇಬ್ಬರು ರಾಷ್ಟ್ರ ಮುಖಂಡರು ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ ಚೆನ್ನಾಗಿರಲಿಲ್ಲ. ಈ ಬಿಕ್ಕಟ್ಟನ್ನು ಮೋದಿಯವರೇ ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಪತ್ರಿಕೆಯು ಬಣ್ಣಿಸಿದೆ.
ಮೋದಿಯವರು ಆಗಾಗ ದೇಶದ ಜನರಿಗೆ ನೀಡಿದ ಕರೆಗಳು (ದೀಪ ಬೆಳಗಿಸಲು, ಕೊರೋನಾ ವಾರಿಯರ್ಸ್ಗೆ ಚಪ್ಪಾಳೆ ತಟ್ಟಲು ) ಅವರನ್ನು ಜನರಿಗೆ ಇನ್ನಷ್ಟು ಹತ್ತಿರ ತಂದಿದೆ. ಜನರು ಅವರ ಕರೆಯನ್ನು ಮನಪೂರ್ವಕವಾಗಿ ಪಾಲಿಸಿದ್ದಾರೆ ಎಂದು ಪತ್ರಿಕೆಯು ವಿವರಿಸಿದೆ.