ಹಾವೇರಿ: ಕೇಂದ್ರದಲ್ಲಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಭಾರತದಲ್ಲಿ ಐತಿಹಾಸಿಕ ಬದಲಾವಣೆಗಳು ಪ್ರಾರಂಭವಾಗಿವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಮಾ.ನಾಗರಾಜ ಹೇಳಿದರು.
ಶುಕ್ರವಾರ ಹಾವೇರಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳ ಓಬಿಸಿ ಮೋರ್ಚಾ ವರ್ಚುವಲ್ ರ್ಯಾಲಿಯ ವಿಡಿಯೋ ಸಂವಾದ ಹಾಗೂ ಹುತಾತ್ಮ ಸೈನಿಕರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ನಂತರ ೬೦ ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಕೇವಲ ಮತ ರಾಜಕಾರಣಕ್ಕೋಸ್ಕರ ಹಲವಾರು ಸಮಸ್ಯೆಗಳನ್ನು ಪರಿಹರಸದೆ ಮೋದಿಯವರು ಬರುವವರೆಗೂ ಭಾರತವನ್ನು ಅಭದ್ರ ಸ್ಥಿತಿಯಲ್ಲಿ ಮುನ್ನಡೆಸಿಕೊಂಡು ಬಂದಿತು ಎಂದರು.
ನರೇಂದ್ರ ಮೋದಿಯವರು ಸಿ.ಎ.ಎ, ಕಲಂ ೩೭೦, ತ್ರಿವಳಿ ತಲಾಖ್, ಯು.ಎ.ಪಿ.ಎ ಜಾರಿಗೆ ತರುವ ಮೂಲಕ ನಮಗೆ ಮತ ರಾಜಕೀಯಕಿಂತ ದೇಶದ ಭದ್ರತೆ ಹಾಗೂ ಜನರ ಅಭಿವೃದ್ದಿ ಮುಖ್ಯ ಎಂಬುವದನ್ನು ಸಾಬಿತು ಪಡಿಸಿದೆ ಎಂದು ಹೇಳಿದರು.
ದೇಶದಲ್ಲಿ ಕರೋನಾ ವ್ಯಾಪಕವಾಗಿ ಹಬ್ಬಿದ ನಂತರ ಬಿಜೆಪಿ ಪಕ್ಷ ಜನರ ಜಾಗೃತಿ ದೃಷ್ಟಿಯಿಂದ ೫ ಸಾವಿರಕ್ಕೂ ಅಧಿಕ ವಿಡಿಯೋ ಸಂವಾದಗಳ ಮೂಲಕ ಸುಮಾರು ೩೦ ಕೋಟಿಗಿಂತಲೂ ಅಧಿಕ ಜನರನ್ನು ತಲುಪಿದೆ. ೨೦ ಲಕ್ಷ ಕೋಟಿ ಆತ್ಮ ನಿರ್ಭರ್ ಭಾರತ ಪ್ಯಾಕೇಜ್ ಘೋಸಿಸುವ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಕಾರ್ಯವಾಗಿದೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗುತ್ತಿದ್ದು, ಆರ್ಥಿಕವಾಗಿ, ಸಮಾಜಿಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠವಾಗುತ್ತಿದೆ, ಪಿ.ಪಿ.ಇ ಕೀಟ್, ವ್ಯಂಟಿಲೇಟರ್ಸ್, ಕೋವಿಡ್ ಸೋಂಕಿತರಿಗೆ ಪ್ರತೇಕ ಹಾಸಿಗೆ ಉತ್ಪಾದನೆ ಮಾಡುವ ಮೂಲಕ ಕರೋನಾ ವಿರುದ್ದ ಹೋರಾಟಕ್ಕೆ ಮುಂಚಿಣಿಯಲ್ಲಿದೆ. ಜನರಿಗೆ ಮೂರು ತಿಂಗಳ ಉಚಿತ ಗ್ಯಾಸ್, ಆಹಾರ ಸಾಮಗ್ರಿ ಹಾಗೂ ಜನ ಧನ ಖಾತೆ, ಕಾರ್ಮಿಕ, ಚಾಲಕ ಹಾಗೂ ಕಿಸಾನ್ ಯೋಜನೆಯ ಮೂಲಕ ಹಣ ಸಂದಾಯ ಮಾಡಿ ಆತ್ಮಸೈರ್ಯ ಹೆಚ್ಚುಸವ ನಿಟ್ಟಿನಲ್ಲಿ ಮಹತ್ತರ ಕಾರ್ಯಕ್ರಮಗಳನ್ನು ಕೇಂದ್ರ ಹಮ್ಮಿಕೊಂಡಿದೆ ಎಂದರು.
ಸಭೆಯಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿ ವರ್ತುರ ಶ್ರೀಧರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಪ್ರಸ್ಥಾವಿಕ ಮಾತನಾಡಿದರು, ವಿಡಿಯೋ ಸಂವಾದದಲ್ಲಿ ಹುಬ್ಬಳ್ಳಿ – ಧಾರವಾಡ, ಗದಗ, ಹಾವೇರಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ಸಂತೋಷ ಆಲದಕಟ್ಟಿ, ಪ್ರದೀಪ ಮುಳ್ಳೂರ, ಗೋಪಾಲ ಬಂಡಿ. ಪ್ರವೀಣ ಸವಣೂರ, ವಿವೇಕಾನಂದ ಇಂಗಳಗಿ, ರಮೇಶ ಪಾಲನಕರ, ವಿಜಯ ಕುಮಾರ ಚಿನ್ನಿಕಟ್ಟಿ, ಮಲ್ಲೇಶ ಪೂಜಾರ ಮುಂತಾದವರು ಭಾಗವಹಿಸಿದ್ದರು.