Tuesday, August 16, 2022

Latest Posts

ಮೋದಿ ಹುಟ್ಟುಹಬ್ಬ: ಬಿಜೆಪಿ ಓಬಿಸಿ ಮೋರ್ಚಾದಿಂದ 70 ಸಸಿಗಳನ್ನು ನೆಟ್ಟು ಚಾಲನೆ

ಚಾಮರಾಜನಗರ: ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಆಚರಣೆ ಅಂಗವಾಗಿ ನಗರದ ಎಲ್‍ಐಸಿ ಹಿಂಭಾಗದ ರಸ್ತೆಯಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದ ನಗರ ಘಟಕದ ವತಿಯಿಂದ 70 ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.

ನಗರದ ನಂದಿ ಭವನ ಮುಂಭಾಗ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಕಾರ್ಯಕ್ಕೆ ನಗರದ ಶ್ರೀ ರಾಮಶೇಷ ಪಾಠಶಾಲೆಯ ಪ್ರಾಚಾರ್ಯರು, ಸಿಂಡಿಕೇಟ್ ಸದಸ್ಯರಾದ ಪ್ರದೀಪ್‍ಕುಮಾರ್‍ದಿಕ್ಷೀತ್ ಸಸಿಗೆ ನೀರೆರುವ ಮೂಲಕ ಚಾಲನೆ ನೀಡಿದರು. ನಂತರ ಓಬಿಸಿ ಮೋರ್ಚಾ ನಗರ ಘಟಕದ ಪದಾಧಿಕಾರಿಗಳು ಸಸಿಗಳನ್ನು ನೆಟ್ಟು ನೀರೆರೆದರು.

ಬಳಿಕ ಮಾತನಾಡಿದ ಪ್ರಾಚಾರ್ಯ ಪ್ರದೀಪ್‍ಕುಮಾರ್ ದಿಕ್ಷೀತ್, ಪ್ರಧಾನಿ ನರೇಂದ್ರ ಮೋದಿ ಅವರು 70ನೇ ಹುಟ್ಟುಹಬ್ಬವನ್ನು ಯಾವುದೇ ಆಡಂಬರ ವಿಲ್ಲದೇ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡುತ್ತಿರುವುದು ಶುಭ ಸೂಚನೆಯಾಗಿದೆ. ಪ್ರದಾನಿ ನರೇಂದ್ರ ಮೋದಿ ಅವರು ದೇಶ ಅತ್ಯಂತ ಪ್ರಾಮಾಣಿಕ ಹಾಗು ದಕ್ಷ ಪ್ರಧಾನ ಮಂತ್ರಿಗಳಾಗಿದ್ದಾರೆ. ಕಳೆದ 6 ವರ್ಷಗಳ ಅವರ ಆಡಳಿತ ದೇಶದ ಅಭಿವೃದ್ದಿಯ ದಿಕ್ಕನ್ನೇ ಬದಲಾವಣೆ ಮಾಡಿದೆ.ಇಂಥ ಮಹಾಪುರುಷರು ಇನ್ನು ಹೆಚ್ಚು ದಿನಗಳ ಜನ ಸೇವೆಯಲ್ಲಿ ತಮ್ಮನ್ನು ಅರ್ಪಣೆ ಮಾಡಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಹಿಂದುಳಿದ ವರ್ಗಗಳ ಮೋರ್ಚಾದ ನಗರ ಘಟಕದ ಅಧ್ಯಕ್ಷ ಎಸ್. ನಂದೀಶ್ ವಿಶ್ವಕರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮೆಲ್ಲರ ನೆಚ್ಚಿನ ಪ್ರಧಾನಿಗಳು ಅಭಿವೃದ್ದಿ ಹರಿಕಾರರು ಆದ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು 70 ಸಸಿಗಳನ್ನು ನೆಟ್ಟು ಪೋಷಣೆ ಮಾಡವು ಸಂಕಲ್ಪದೊಂದಿಗೆ ಆಚರಣೆ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಯುವಕರ ಆಶಾಕಿರಣ, ಬಲಿಷ್ಟ ಭಾರತ ನಿರ್ಮಾಣಕತೃ, ಸದಾ ದೇಶದ ಬಗ್ಗೆ ಚಿಂತನೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಇನ್ನು ಹೆಚ್ಚಿನ ಆಯಷ್ಯ ಆರೋಗ್ಯವನ್ನು ಕರುಣಿಸಿ, ಭಾರತದ ಭೂಪಟ ವಿಶ್ವದಲ್ಲಿಯೇ ಎತ್ತರಿಕ್ಕೆ ನಿಲ್ಲಿಲಿ ಎಂಬುದು ನಮ್ಮೇಲ್ಲರ ಅಶಯವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರು ಕಾರ್ಯಪ್ರವೃತ್ತರಾಗಿ ಅವರ ಯೋಜನೆಗಳು ಹಾಗೂ ಕೇಂದ್ರ ಸರ್ಕಾರ ಮಹತ್ವಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಗೂ ಸಹ ತಲುಪಿಸೋಣ ಎಂದರು.

ಕಾರ್ಯಕ್ರಮದಲ್ಲಿ ಸೇವಾ ಸಪ್ತಾಹದ ಪ್ರಮುಖ್ ಡಾ. ಎ.ಆರ್. ಬಾಬು, ಓಬಿಸಿ ಮೋರ್ಚಾದ ಅಧ್ಯಕ್ಷ ಎಸ್ ನಂದೀಶ್ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ, ಚಂದ್ರಶೇಖರ್, ಶ್ರೀಕಾಂತ್, ನಗರ ಘಟಕದ ಅಧ್ಯಕ್ಷ ರಾಜು, ನಗರಸಭಾ ಸದಸ್ಯ ಮಂಜುನಾಥ್, ಕಾರ್ಯದರ್ಶಿ ಶಿವು, ಮರಿಯಾಲ ಮಹೇಶ್, ಅಜಾಧ್ ಹಿಂದು ಸೇನೆಯ ಪ್ರಥ್ವಿರಾಜ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್, ಸೂರ್ಯಕುಮಾರ್, ವಿರಾಟ್ ಶಿವು, ಹೊಸೂರು ರಾಜು ಮೊದಲಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss