ಮoಡ್ಯ| ಮೈಷುಗರ್ ಗುತ್ತಿಗೆ ಪರ ವಹಿಸುವವರು ರೈತರೇ ಆಲ್ಲ: ಮಾದೇಗೌಡ ಟೀಕೆ

0
35

ಮoಡ್ಯ: ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣ ಅಥವಾ ಗುತ್ತಿಗೆ ನೀಡಬೇಕು ಎಂದು ಪ್ರತಿಪಾದಿಸುವವರು ರೈತರೇ ಅಲ್ಲ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಕಿಡಿಕಾರಿದರು.
ಈ ಭಾಗದಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗಳು ಇಲ್ಲದಿದ್ದಾಗ ಮಂಡ್ಯದಲ್ಲಿ ಪ್ರಥಮ ಸಕ್ಕರೆ ಕಾರ್ಖಾನೆ ಆರಂಭವಾಯಿತು. ಅಂದಿನಿoದ ಮಂಡ್ಯಕ್ಕೆ ಸಕ್ಕರೆ ನಾಡು ಎಂಬ ವಿಶೇಷಣವಿದೆ. ಇದನ್ನು ಅರಿಯದ ಕೆಲವರು ಕಾರ್ಖಾನೆಯನ್ನು ಖಾಸಗಿಗೆ ವಹಿಸಬೇಕು ಎಂದು ಬಡಬಡಾಯಿಸುತ್ತಿದ್ದಾರೆ. ಇಂತಹ ಜನರು ರೈತರೇ ಅಲ್ಲ ಎಂದು ಟೀಕಿಸಿದರು.
ಪ್ರಸ್ತುತ ಮೈಷುಗರ್ ಕಾರ್ಖಾನೆಯನ್ನು ಸರ್ಕಾರ ಖಾಸಗಿಗೆ ಮಾರಿಬಿಡಲು ಹೊರಟಿದೆ ಎಂಬ ವದಂತಿ ಇದೆ. ನಾನು ಸಕ್ಕರೆ ಸಚಿವರು ಹಾಗೂ ಉಸ್ತುವಾರಿ ಸಚಿವರನ್ನು ವಿಚಾರಿಸಿದಾಗ ಇಂತಹ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಖಚಿತವಾಗಿ ತಿಳಿಸಿದ್ದಾರೆ. ಒಂದು ವೇಳೆ ಇದಕ್ಕೂ ಮೀರಿ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿದ್ದೇ ಆದರೆ ರೈತರು ದಂಗೆ ಏಳ್ತಾರೆ ಹುಷಾರ್ ಎಂದು ಗುಡುಗಿದರು.

LEAVE A REPLY

Please enter your comment!
Please enter your name here