Thursday, August 11, 2022

Latest Posts

ಮoಡ್ಯ| ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ: ಆರೋಪಿಗಳ ಬಂಧನ

ಮoಡ್ಯ: ಲಾಕ್‌ಡೌನ್ ನಡುವೆಯೂ ಕೃಷ್ಣರಾಜಸಾಗರದ ಹಿನ್ನೀರಿನ ತೋಟದಲ್ಲಿ ತಡರಾತ್ರಿ ಭರ್ಜರಿ ಪಾರ್ಟಿ ಮಾಡಿ ನಿಯಮ ಉಲ್ಲಂಘಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಶೇಖರ್ ಎಂಬುವರಿಗೆ ಸೇರಿದ ತೋಟದಲ್ಲಿ ದಾಸಪ್ಪ ಎಂಬುವರ ಜನ್ಮದಿನದ ಪಾರ್ಟಿ ನಡೆದಿತ್ತು. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿ ಭರತ್‌ರಾಜ್ ಸೇರಿದಂತೆ ೩೪ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಇವರು ಸರ್ಕಾರದ ಆದೇಶ ಉಲ್ಲಂಘಿಸಿ ಯಾವುದೇ ಅನುಮತಿ ಪಡೆಯದೇ ತಡರಾತ್ರಿ ಡಕ್ ಮತ್ತು ಮ್ಯೂಸಿಕ್ ಸ್ಪೀಕರ್‌ಗಳನ್ನು ಹಾಕಿಕೊಂಡು ಆರೋಪಿಗಳು ನೃತ್ಯ ಮಾಡಿದ್ದಾರೆ. ಅಲ್ಲದೇ, ಸಾರ್ವಜನಿಕರಿಗೂ ತೊಂದರೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಮಾಹಿತಿ ಅರಿತ ಕೆ.ಆರ್.ಎಸ್. ಠಾಣೆಯ ಪಿಎಸ್‌ಐ ನವೀನ್‌ಗೌಡ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss