Thursday, August 11, 2022

Latest Posts

ಯಡಿಯೂರಪ್ಪನವರ ಸರ್ಕಾರದಲ್ಲಿ ನಾನು ಸಚಿವನಾಗಲ್ಲ: ಯತ್ನಾಳ

ಹೊಸ ದಿಗಂತ ವರದಿ, ವಿಜಯಪುರ:

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸರ್ಕಾರದಲ್ಲಿ ತಾವು ಸಚಿವನಾಗಬಾರದು ಎಂದು ನಿರ್ಣಯ ಮಾಡಿದ್ದೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ರೀತಿ ಹೇಳುವ ಮೂಲಕ ಇನ್ನಿಲ್ಲದ ಚರ್ಚೆಗೆ ಎಡೆಮಾಡಿಕೊಟ್ಟಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಯಡಿಯೂರಪ್ಪನವರ ಸರ್ಕಾರದಲ್ಲಿ ಸಚಿವನಾಗಬಾರದು ಎಂದು ತೀರ್ಮಾನ ಮಾಡಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೂಡ ಸಚಿವನಾಗುವಂತೆ ನನಗೆ ಹೇಳುವುದಿಲ್ಲ ಎನ್ನುವ ವಿಶ್ವಾಸ ನನಗಿದೆ ಎಂದರು.
ನನಗೆ ಸಚಿವ ಸ್ಥಾನದ ಮೇಲೆ ಆಸೆ ಇಲ್ಲ. ನಾನು ಮಂತ್ರಿಯಾಗೊದರಿಂದ ದೊಡ್ಡ ಲಾಭವೂ ಇಲ್ಲ. ಕೃಷ್ಣಾ ಕೊಳ್ಳಕ್ಕೆ ಮುಂದಿನ ಬಜೆಟ್‌ನಲ್ಲಿ 25 ಸಾವಿರ ಕೋಟಿ ಕೊಡಬೇಕು ಎನ್ನುವ ಒತ್ತಾಯವಿದೆ. ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವ ಒತ್ತಾಯವಿದೆ ಎಂದರು.
ಅಲ್ಲದೆ, ಯತ್ನಾಳರಿಗೆ ನೋಟಿಸ್ ಕೊಡುವುದನ್ನೆ, ಮಾಧ್ಯಮದವರು ಯಾಕೆ ಚಿಂತಿ ಮಾಡುತ್ತಿರಿ, ಇನ್ನಿತರ ಕೆಲಸ, ಕಾರ್ಯಗಳ ಕುರಿತು ಗಮನ ಹರಿಸರಿ. ನನಗೆ ನೋಟಿಸ್ ಕೊಟ್ಟಿಲ್ಲ. ಈ ವಿಷಯವನ್ನು ಇಲ್ಲಿಯೇ ಕೈ ಬಿಡಬೇಕು ಎಂದು ವಿನಂತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss