Thursday, January 28, 2021

Latest Posts

ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿದವರು ಎಂದು ಹೇಳುವ ನೈತಿಕತೆ ವಿಶ್ವನಾಥ್‌ಗೆ ಇಲ್ಲ: ಜೆಡಿಎಸ್ ಶಾಸಕ ಮಹೇಶ್ ಟಾಂಗ್

ಹೊಸ ದಿಗಂತ ವರದಿ, ಮೈಸೂರು:

ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಸಚಿವರಾಗದಿರಲೂ ನಾಡ ಅಧಿದೇವತೆ ಚಾಮುಂಡೇಶ್ವರಿಯ ಶಾಪವೇ ಪ್ರಮುಖ ಕಾರಣ. ಅಲ್ಲದೇ ನ್ಯಾಯ ದೇವತೆಯ ಶಾಪದಿಂದ ಅವರು ಅಪೇಕ್ಷಿಸಿದ್ದು ಸಿಕ್ಕಿಲ್ಲ ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಹೇಳಿದರು.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಮೂಲೆಗುಂಪಾಗಿದ್ದ ವ್ಯಕ್ತಿಯನ್ನು ತನು ಮನ ಧನ ನೀಡಿ ಆಶ್ರಯ ಕೊಟ್ಟ ನಮ್ಮ ಜಾತ್ಯಾತೀತ ಜನತಾದಳಕ್ಕೆ ದ್ರೋಹ ಮಾಡಿದರು. ಈ ರೀತಿ ವರ್ತಿಸಿದ ನಿಮಗೆ ಕಾರ್ಯಕರ್ತರ ನಿಟ್ಟುಸಿರು ಹೆಚ್. ವಿಶ್ವನಾಥ್‌ರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.
ನಿಮಗೆ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತಿಗೆ ತಪ್ಪಿದವರೆಂದು ಹೇಳುವ ನೈತಿಕತೆ ಇಲ್ಲ. ಹೋಗಿದ್ದ 17 ಜನರಲ್ಲಿ ಹದಿನಾರು ಜನರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಅಲ್ಲದೇ ಹೈಕೋರ್ಟ್ ತೀರ್ಪಿಗಿಂತ ಯಡಿಯೂರಪ್ಪ ದೊಡ್ಡವರಲ್ಲ. ವಿಶ್ವನಾಥ್ ಅವರೇ ದೇವೇಗೌಡರು ದೇವರಾದರೆ ಹೆಚ್.ಡಿ. ಕುಮಾರಸ್ವಾಮಿ ರಾಕ್ಷಸರಾಗಿಬಿಟ್ಟರೆ?. ಅವರು ನಿಮ್ಮನ್ನು ಗೌರವಿಸಿ ಟಿಕೆಟ್ ನೀಡಿ ಗೆಲ್ಲಿಸಿದ್ದು ನಮ್ಮ ಕಣ್ಣ ಮುಂದೆ ಹಾಗೆಯೇ ಇದೆ ಎಂದು ಹೆಚ್.ವಿಶ್ವನಾಥ್‌ಗೆ ತಿರುಗೇಟು ನೀಡಿದರು.
ವಿಶ್ವನಾಥ್ ಅಧಿಕಾರದ ಆಸೆಗಾಗಿ ಸಚಿವ ಸ್ಥಾನ ಅಪೇಕ್ಷಿಸಿದ್ದರು. ಆದರೆ ಅವರಿಂದ ಯಾವ ಕೆಲಸವೂ ಮಾಡಲು ಸಾಧ್ಯವಿಲ್ಲವೆಂದು ಬಿಜೆಪಿಯೇ ತೀರ್ಮಾನಿಸಿ ಸುಮ್ಮನಾಗಿಬಿಟ್ಟಿದೆ ಎಂದು ಹಳ್ಳಿಹಕ್ಕಿಯ ವಿರುದ್ಧ ಶಾಸಕ ಸಾರಾ ಮಹೇಶ್ ಕುಟುಕಿದ್ದಾರೆ.
ಹೆಚ್.ವಿಶ್ವನಾಥ್‌ರಿಗೆ ಶಾಸಕ ಸ್ಥಾನ ಹೊಂದಬಾರದು ಎಂದು ಹೈಕೋರ್ಟ್ ತೀರ್ಪು ನೀಡಿದ್ದರೂ ಪರಿಷತ್ ಸದಸ್ಯರಾಗಿದ್ದಾರೆ. ಇವೆಲ್ಲವನ್ನೂ ನೋಡಿದರೇ ಈಗ ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!