Tuesday, August 16, 2022

Latest Posts

ಯತ್ನಾಳ್ ನಮ್ಮ ಪಕ್ಷದಲ್ಲೇ ಇದ್ದಾರೆ, ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುತ್ತೇವೆ: ಸಚಿವ ವಿ.ಸೋಮಣ್ಣ

ದಿಗಂತ ವರದಿ ಮೈಸೂರು:

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷದಲ್ಲೇ ಇದ್ದಾರೆ, ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದೆ ಅದನ್ನು ಸರಿ ಮಾಡಿಕೊಳ್ಳುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಶುಕ್ರವಾರ ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ.ಅವರು ಪ್ರಶ್ನಾತೀತ ನಾಯಕ. ನಾನು ಒಬ್ಬ ಮಂತ್ರಿ, ಅವರ ಆದೇಶದಂತೆ ನಾವು ಕೆಲಸ ಮಾಡುತ್ತೇವೆ. ಆದರೆ ಅವರ ಪರವಾಗಿ ನಾನೇನು ಯತ್ನಾಳ್ ಮನೆಗೆ ರಾಜಿಗೆ ಹೋಗಿರಲಿಲ್ಲ. ನಮ್ಮ ಇಲಾಖೆಯ ಕಾರ್ಯಕ್ರಮ ಅವರ ಕ್ಷೇತ್ರದಲ್ಲಿ ೬ ತಿಂಗಳ ಹಿಂದೆಯೇ ನಡೆಬೇಕಿತ್ತು. ಆ ಕಾರ್ಯಕ್ರಮದ ಬಗ್ಗೆ ಅದರ ಆಯೋಜನೆ ಮಾತನಾಡಲು ಹೋಗಿದ್ದೆ, ಯತ್ನಾಳ್ ಮನೆಗೆ ಹೋಗಿ ಒಳ್ಳೆ ಊಟ ಮಾಡಿದ್ದೇನೆ. ನನ್ನ ಕಾರ್ಯಕರ್ತರಿಗೂ ಊಟ ಹಾಕಿದರು. ನಾನು ಅವರ ಮನವೊಲಿಸುವ ಕೆಲಸ ಮಾಡಿಲ್ಲ. ಯತ್ನಾಳ್ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೂರಾರು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಯತ್ನಾಳ್ ಕೂಡ ನಮ್ಮ ಪಕ್ಷದ ಹಿರಿಯ ನಾಯಕನಾಗಿದ್ದಾರೆ. ಬುದ್ದಿವಂತರು. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಬಿಜೆಪಿಯಲ್ಲಿ ಯಾರಿಗೂ ಅನ್ಯಾಯ ಮಾಡುವ ಅವಕಾಶವೇ ಇಲ್ಲ, ಎಲ್ಲರಿಗೂ ನ್ಯಾಯ ಸಿಗುತ್ತದೆ, ಎಲ್ಲವೂ ಸರಿಹೋಗುತ್ತದೆ ಯಾರು ತಲೆಕಡೆಸಿಕೊಳ್ಳಬೇಡಿ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss