Tuesday, June 28, 2022

Latest Posts

ಯಶಸ್ವಿ ಕೊರೋನಾ ಲಸಿಕೆ ಅಭಿಯಾನ: ಅಭಿನಂದನೆ ಸಲ್ಲಿಸಿದ್ದ ಶ್ರೀಲಂಕಾ ಪ್ರಧಾನಿಗೆ ಧನ್ಯವಾದ ಹೇಳಿದ ಮೋದಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್-19 ವಿರುದ್ಧದ ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿದ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಷೆಗೆ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದು, ಅವರಿ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.

ಟ್ವೀಟ್ ಮೂಲಕ ರಾಜಪಕ್ಷೆ ಅವರಿಗೆ ಧನ್ಯವಾದ ತಿಳಿಸಿದ ಪ್ರಧಾನಿ, ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ  ವಿಜ್ಞಾನಿಗಳು ಮತ್ತು ಕೊರೋನಾ ವಾರಿಯರ್ಸ್ ಗಳ ದಣಿವರಿಯದ ಪ್ರಯತ್ನಗಳು ನಿರ್ಣಾಯಕ ಪಾತ್ರ ವಹಿಸಿವೆ. ಆರೋಗ್ಯಕರ ಪ್ರಪಂಚ ನಿರ್ಮಾಣಕ್ಕೆ ವೇಗಗತಿಯಲ್ಲಿ ಲಸಿಕೆ ತರುವ  ನಮ್ಮ ಜಂಟಿ ಪ್ರಯತ್ನ  ಬಹಳ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.

ಕೊರೋನಾ ಲಸಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆಯಷ್ಟೇ ಚಾಲನೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss