ರಾಕಿಂಗ್ ಸ್ಟಾರ್ ಯಶ್ ಅಭಿನಯ ಬಹುನಿರೀಕ್ಷೆಯ ಕೆಜಿಎಫ್ -೨ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.
೨೦ ದಿನಗಳ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಇದೇ ತಿಂಗಳು ೧೫ರ ನಂತರ ಚಿತ್ರೀಕರಣಕ್ಕೆ ಹೊರಡಲು ರೆಡಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಬೇಕಿತ್ತು. ಆದರೆ ಕೊರೋನಾ ಹಾವಳಿಯಿಂದ ಸಿನಿಮಾದ ಲೆಕ್ಕಾಚಾರಗಳೇಲ್ಲವೂ ಉಲ್ಟಾ ಹೊಡೆದಿದೆ. ಇನ್ನು ಈ ಸಿನಿಮಾವನ್ನು ಆಕ್ಟೋಬರ್ ೨೩ಕ್ಕೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಹೀಗಾಗಿ ಆ ದಿನಕ್ಕಾಗಿ ಕನ್ನಡ ಸಿನಿಪ್ರಿಯರು ಮಾತ್ರವಲ್ಲದೆ ಇಡೀ ‘ಭಾರತವೇ ಕಾದು ಕುಳಿತಿತ್ತು. ಆದರೆ ಇದೀಗ ಕೆಜಿಎಫ್ -೨ ಅಂದುಕೊಂಡ ದಿನಕ್ಕೆ ರಿಲೀಸ್ ಆಗುವ ಸಾ ಧ್ಯತೆ ತುಂಬಾ ಕಡಿಮೆ ಇದೆ. ಈಗಾಗಲೆ ಸಾಕಷ್ಟು ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಮುಂದಕ್ಕೆ ಹೋಗಿವೆ. ಕೆಜಿಎಫ್ ಸಹ ಮುಂದಿನ ವರ್ಷ ತೆರೆಗೆ ಬರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಬಹುನಿರೀಕ್ಷೆಯ ಕೆಜಿಎಫ್ ೨೦೨೧ ಸಂಕ್ರಾಂತಿಗೆ ರಿಲೀಸ್ ಆಗಲಿದೆಯಂತೆ. ಸಂಕ್ರಾಂತಿ ರಿಲೀಸ್ ಗೆ ಸಿನಿಮಾತಂಡ ಪ್ಲಾನ್ ಮಾಡುತ್ತಿದೆಯಂತೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೆ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಇತ್ತೀಚಿಗಷ್ಟೆ ಸಿನಿಮಾದಿಂದ ಅಧೀರ ಲುಕ್ ರಿಲೀಸ್ ಆಗಿದೆ. ‘ಭಯಾನಕ ಅಧೀರನನ್ನು ನೋಡಿ ಅಭಿಮಾನಿಗಳು ತಲೆಕೆಸಿಕೊಂಡಿದ್ದಾರೆ. ಸಿನಿಮಾದಲ್ಲಿ ಸಂಜಯ್ ದತ್
ಆಭರ್ಟ ಹೇಗಿರಲಿದೆ ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.