Wednesday, August 10, 2022

Latest Posts

ಯಾದಗಿರಿಗೂ ಮುಂಬೈ ಭಯ: ಮತ್ತೇ ಮೂರು ಸೋಂಕು, 5ಕ್ಕೆ ಏರಿದ ಕೊರೋನಾ ಪೀಡಿತರ ಸಂಖ್ಯೆ

ಯಾದಗಿರಿ: ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಮೂವರು ಕಾರ್ಮಿಕರಿಗೆ ಕೋವಿಡ್-19 ದೃಢಪಟ್ಟಿದ್ದು 5 ಕ್ಕೆ ಏರಿದೆ.
ಮಹಾರಾಷ್ಟçದಿಂದ ವಲಸೆ ಬಂದಿದ್ದ ಕಾರ್ಮಿಕರಲ್ಲಿ ಥಾಣೆಯಿಂದ ಬಂದ ಇಬ್ಬರಿಗೆ ಮತ್ತು ಮುಂಬೈನಿoದ ಬಂದ ಓರ್ವನಿಗೆ ಸೋಂಕು ದೃಢ ಪಟ್ಟಿದೆ. ಥಾಣೆಯಿಂದ ಬಂದ ಪಿ-೧೧೩೯ (೩೦) ವರ್ಷ ಮತ್ತು ಪಿ-೧೧೪೧ (೩೪) ವರ್ಷದ ಇಬ್ಬರು ಪುರುಷರು ಮತ್ತು ಮುಂಬೈನಿoದ ಬಂದ ೧೧೪೦(೨೨) ವರ್ಷದ ಯುವಕನಿಗೆ ಸೋಂಕು ತಾಗಿರುವುದು ದೃಢವಾಗಿದೆ.
ಕಳೆದ ಮೇ.೧೨ರಂದು ಮೊದಲ ಬಾರಿಗೆ ಸುರಪುರ ನಗರಕ್ಕೆ ಗುಜರಾತ್‌ನ ಅಹಮದಾಬಾದ್ ನಿಂದ ಆಗಮಿಸಿದ ದಂಪತಿ ೩೩ ವರ್ಷದ ಮಹಿಳೆ ಪಿ- ೮೬೭, (೩೮) ವರ್ಷದ ಪುರುಷ ಪಿ- ೮೬೮ ಸೋಂಕು ಕಾಣಿಸಿತ್ತು.
ಹಸಿರು ಪಟ್ಟಿಯಲ್ಲಿದ್ದ ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರದಿಂದ ಚಲಸೆ ಕೂಲಿ ಕಾರ್ಮಿಕರಿಂದ , ಸೋಂಕು ಹರಡುತ್ತಿರುವುದು ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ಕಾರಣ ಭಾನುವಾರ ಸಹ ಮಹಾರಷ್ಟಿçಂದ ವಿಶೇಷ ರೈಲಿನ ಮೂಲಕ ಸಾವಿರಾರು ಕಾರ್ಮಿಕರು ಆಗಮಿಸಲಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ಅಓಂಕಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಲಿವೆ.
ಬೆಂಡಗAಳಿ ಮತ್ತು ಕನ್ನಯ ಕೌಳುರು ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವ ಮೂವರಲ್ಲಿ ಸೋಂಕು ದೃಡಪಟ್ಟಿದ್ದು ಇದು ಎಲ್ಲರೂ ಸಾಮೂಹಿಕವಾಗಿಯೇ ಇರುವುದರಿಂದ ಅವರು ದಾಖಲಾದಾಗಿನಿಂದ ಅವರ ಪ್ರಾಥಮಿಕ ಸಂಪರ್ಕದಲ್ಲಿ ಎಷ್ಟು ಜನ ಬಂದವರು ಮತ್ತು ದ್ವಿತೀಯ ಸಂಪರ್ಕ ಹೊಂದಿದವರು ಎಷ್ಟು ಎನ್ನುವುದು ಜಿಲ್ಲಾಡಳಿತಕ್ಕೆ ತಲೆನೋವು ಪರಿನಮಿಸಿದೆ. .
ಸುಮಾರು ೪೫ ದಿನಗಳಿಂದ ಹಸಿರು ಝೋನಿನಲ್ಲಿದ್ದ ಯಾದಗಿರಿ ಜಿಲ್ಲೆಗೆ ಕೋವಿಡ್-೧೯ ಭಯಯಿರಲಿಲ್ಲ. ಇದೀಗ ಲಾಕ್‌ಡೌನ್ ಸಡಿಲಿಕೆ ವೇಳೆಯಲ್ಲಿಯೇ ಸರಕು ಸಾಗಾಣೆ ವಾಹನದಲ್ಲಿ ಅಹಮದಾಬಾದ್ ನಿಂದ ಬಂದ ದಂಪತಿಗಳು ಸೋಂಕು ತಂದರೆ, ಇದೀಗ ಮಹಾರಾಷ್ಟ್ರ ದಿಂದ ಬಂದವರು ಮುಳುವಾಗಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss