Saturday, August 13, 2022

Latest Posts

ಯಾದಗಿರಿಗೆ ಮುಂಬೈಯಿಂದ ಬರುತ್ತಿದೆ ರೈಲು; ಜನತೆಯಲ್ಲಿ ಹೆಚ್ಚುತ್ತಿದೆ ಆತಂಕ

ಯಾದಗಿರಿ : ದೇಶವ್ಯಾಪ್ತಿ ರೈಲುಗಳ ಸೇವೆ ಆರಂಭಿಸಿದ ಹಿನ್ನಲೆಯಲ್ಲಿ ಇವತ್ತು ಮುಂಬೈಯಿ0ದ ಬೆಂಗಳೂರಿಗೆ ಹೋಗುವ ಉದ್ಯಾನ ಎಕ್ಸಪ್ರೆಸ್ ರೈಲು ಸೋಮವಾರ ರಾತ್ರಿ 9 ಗಂಟೆಗೆ ಯಾದಗಿರಿ ಬರಲಿದೆ. ಇದು ಯಾದಗಿರಿ ಜನತೆಯಲ್ಲಿ ಆತಂಕೆ ಸೃಷ್ಟಿಸಿದೆ.
ಈಗಾಗಲೇ ಮುಂಬೈಯಿAದ ಬಂದ ಕೂಲಿ ಕಾರ್ಮಿಕರಿಂದ ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳು ಕೊರೋನಾ ಸೋಂಕು ಹರಡಿ ತತ್ತರಿಸಿಹೋಗಿದ್ದಾರೆ. ಇಂತಹ ಸಮಯದಲ್ಲಿ ಸೋಂಕಿತ ಪ್ರದೇಶದಿಂದ ರೈಲು ಬರುತ್ತಿರುವುದು ಜಿಲ್ಲೆಯ ಜನತೆಯ ಭೀತಿಗೆ ಕಾರಣವಾಗಿದೆ.
ಈ ರೈಲು ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಮೂಲಕ ಹಾಯ್ದು ಹೋಗುತ್ತದೆ. ಈ ರೈನಿನಲ್ಲಿ ಬಹು ಸಂಖ್ಯೆಯಲ್ಲಿ ಪ್ರಯಾಣಿಕರು ಈ ಮೂರು ಜಿಲ್ಲೆಗ ಬರುವುದು ವಾಡಿಕೆ. ಮಹಾರಾಷ್ಟçದಲ್ಲಿ ಯಾವುದೆ ಚಿಕಿತ್ಸೆಗೆ ಒಳಪಡಿಸಿದೆ ನೇರವಾಗಿ ಕಳುಹಿಸಿಕೊಡಲಾಗುತ್ತಿದೆ. ಇದರಿಂದಾಗಿ ಬರುವ ಪ್ರಯಾಣಿಕರೆಲ್ಲ ಎಷ್ಟ್ಟು ಸುರಕ್ಷಿತರು ಎಂಬ ಪ್ರಶ್ನೆ ಕಾಡುತ್ತಿದೆ.
ಇವತ್ತು ಬರುವ ಪ್ರಯಾಣಿಕರನ್ನು ಜಿಲ್ಲಾಡಳಿತ ಸ್ಕಿçÃನಿಂಗ ಮಾಡಿ ಸೀಲಹಾಕಿ ಹೊಂ ಕ್ವಾರಂಟೈನಿಗೆ ಅಳವಡಿಸಲು ಮುಂದಾಗಿದೆ. ಈಗಾಗಲೇ ಬಸ್ಸುಗಳ ಮತ್ತು ಇತರ ವಾಹನಗಳ ಮೂಲಕ ಬಂದ ಕೂಲಿ ಕಾರ್ಮಿಕರನ್ನು ಆಯಾ ಜಿಲ್ಲೆಗಳು ಕ್ವಾರಂಟೈನಿಗೆ ಅಳವಡಿಸಲಾಗಿದೆ. ಅವರಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಅಲ್ಲದೆ ಕ್ವಾರಂಟೈನ ಅವಧಿ ಮುಗಿಸಿ ಬಿಡುಗಡೆಗೊಳಿಸಿದ ಕಾರ್ಮಿಕ್ರಲ್ಲೂ ಸೋಂಕು ಕಂಡುಬAದಿದ್ದು ಜಿಲ್ಲಾಡಳಿತಕ್ಕೆ ತಲೆ ಬಿಸಿಯಾಗಿ ಪರಿಣಮಿಸಿದೆ.
ಈಗಾಗಲೇ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆ ಹೊರತು ಪಡಿಸಿದರೆ ಕಲಬುರಗಿಯಲ್ಲಿ 280, ಯಾದಗಿರಿಯಲ್ಲಿ 285, ರಾಯಚೂರಿನಲ್ಲಿ 221, ಬೀದರಲ್ಲಿ 163 ಮತ್ತು ಬಳ್ಳಾರಿಯಲ್ಲಿ 51 ಸೋಂಕಿತರ ಸಂಖ್ಯೆ ಕೇವಲ 10 ದಿನಗಳಲ್ಲಿ ಏರಿಕೆಯಾಗಿದೆ. ಭಾನುವಾರ ಒಂದೇ ದಿನ ರಾಯಚೂರಿನಲ್ಲಿ 93 ಜನರಲ್ಲಿ ಪತ್ತೇಯಾಗಿದೆ. ಈ ಎಲ್ಲಾ ಜಿಲ್ಲೆಗಳಿಗೆ ಮರಳಿದ ಕಾರ್ಮಿಕರ ಅರ್ಧದಷ್ಟು ಜನರ ಮಾದರಿಗಳ ಪರೀಕ್ಷೆಯಾಗಿಲ್ಲ. ಸೋಂಕಿತರಲ್ಲಿ ಶೇ 90 ರಷ್ಟು ಮಹಾರಾಷ್ಟçದಿಂದ ಮರಳಿದ ಕೂಲಿ ಕಾರ್ಮಿಕರೆ ಇದ್ದಾರೆ.
ಇಂತಹ ಸಂದರ್ಭದಲ್ಲಿ ಪ್ರತಿ ದಿನ ರೈಲು ಮೂಲಕ ಬರುವ ಪ್ರಯಾಣಿಕರನ್ನು ಕೇವಲ ಸ್ಕಿçÃನಿಂಗ ಒಳಪಡಿಸಿ ಸೀಲೂಹಾಕಿ ಅವರನ್ನು ಹೋಂ ಕ್ವಾರಂಟೈನಿಗೆ ಕಳುಸಹಿಸುವುದು ಸರಿಯೇ. ಅವರು ಸಾಮಜಿಕ ಅಂತರ ಕಾಪಾಡುವುರೆ, ಅವರಲ್ಲಿ ಸೋಂಕು ಕಂಡುಬAದಲ್ಲಿ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ ಎಂಬುದು ಜನರ ಪ್ರಶ್ನೆಯಾಗಿದೆ. ಅವರು ತಮ್ಮ ಮನೆಯಲ್ಲಿದ್ದರೆ ವಾಸಿ. ಅದು ಬಿಟ್ಟು ಬೇಕಾಬಿಟ್ಟಿ ಓಡಾಟ ಮಾಡಿದರೆ ಗ್ರಾಮೀಣ ಪ್ರದೇಶಕ್ಕೂ ಸೋಂಕು ಹರಡಬಹುದು ಎಂಬ ಆತಂಕ ಜನರದಾಗಿದೆ.
ಸರಕಾರದ ಮಾರ್ಗಸೂಚಿಯ ಪ್ರಕಾರ ನಾವು ಕ್ರಮ ಜರಗಿಸುತ್ತಿದ್ದೇವೆ ಎಂಬುದು ಜಿಲ್ಲಾಡಳಿತದ ಹೇಳಿಕೆಯಾಗಿದೆ. ಇಂದು ಸಂಹೆ ಬಿಡುಗಡೆಯಾಗುವ ಆರೋಗ್ಯ ಇಲಾಖೆಯ ಬುಲೆಟಿನಲ್ಲಿ ಬರುವ ಸಂಖ್ಯೆಗಳು ಮೂರು ಜಿಲ್ಲೆಗಳು ತ್ರಿಶತಕ ದಾಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಜಿಲ್ಲಾಡಳಿತ ರೈಲಿನಲ್ಲಿ ಬರುವ ಪ್ರಯಾಣಿಕರನ್ನು ಹೇಗೆ ನೀಯಂತ್ರಿಸಿ ರೋಗ ಹರಡದಂತೆ ತಡೆಯಲು ಯಾವ ಕ್ರಮ ಜರಗಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss