Thursday, July 7, 2022

Latest Posts

ಯಾದಗಿರಿ|ಛಾಯಾ ಭಗವತಿ, ಕೊಪ್ಪರ ನರಸಿಂಹ ದೇವಸ್ಥಾನ ಜಲಾವೃತ್ತ

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪೂರ ಗ್ರಾಮದ ಛಾತಾ ಭಗವತಿ ದೇವಸ್ಥಾನ ಹಾಗೂ ರಾಯಚೂರು ಜಿಲ್ಲೆಯ ಕೊಪ್ಪರ ಗ್ರಾಮದ ಶ್ರೀ ನರಸಿಂಹ ದೇವಸ್ಥಾನ ಜಲಾವೃತ್ತಗೊಂಡಿವೆ.
ಪ್ರಸಕ್ತ ಬಸವಸಾಗರದಿಂದ ಕೃಷ್ಣಾ ನದಿಗೆ ಸುಮಾರು 2.80 ಲಕ್ಷ ಕ್ಯೂಸೆಕ್ ನೀರನ್ನು 27 ಗೇಟುಗಳ ಮೂಲಕ ಹರಿಬಿಟ್ಟಿದ್ದರಿಂದ ನದಿ ಉಕ್ಕಿ ಹರಿಯುತ್ತಿದ್ದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಪ್ರಸಿದ್ದ ಎರಡು ದೇವಸ್ಥಾನಗಳು ಜಲಾವೃತ್ತಗೊಂಡಿವೆ.
ಮಹಾರಾಷ್ಟ್ರದಲ್ಲಿ ಹಾಗೂ ಬೆಳಗಾವಿ ಭಾಗದಲ್ಲಿ ಮಳೆ ಹೆಚ್ಚಾಗಿದ್ದರಿಂದ ಎಲ್ಲಾ ಉಪನದಿಗಳು ತುಂಬಿ ಹರಿಯುತ್ತಿದ್ದು, ಆಲಿಮಟ್ಟಿ ಮತ್ತು ಬಸವಸಾಗರ ಭರ್ತಿಯಾಗಿವೆ. ಇದರಿಂದಾಗಿ ಬಸವಸಾಗರದಿಂದ 2.80 ಲಕ್ಷ ಕ್ಯೂಸೆಕ ನೀರು ಬಿಟ್ಟಿದ್ದರಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ನದಿ ಪಾತ್ರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗುತಿದೆ. ಈಗಾಗಲೆ ಜಿಲ್ಲಾಡಳಿತ ಎಲ್ಲಾ ಗ್ರಾಮಗಳಲ್ಲಿ ಡಂಗುರ ಮೂಲಕ ಜಾಗೃತಿ ಮೂಡಿಸಿ ನದಿ ಪಾತ್ರಕ್ಕೆ ತೆರಳದಂತೆ ಜನರಲ್ಲಿ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೊರ್ಮಾರಾವ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss