ಯಾದಗಿರಿ : ದೇಶವ್ಯಾಪ್ತಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಕರೆದ ಬಂದ ನಗರದಲ್ಲಿ ಬಹುತೇಕ ಯಶಸ್ವಿಯಾಗಿ ಕಂಡು ಬಂದಿತು.
ಬೆಳಿಗ್ಗೆಯಿಂದಲೆ ವಿವಿಧ ಸಂಘಟನೆಗಳು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವಂತೆ ಮನವಿ ಮಾಡಿದರು. ಮನವಿಗೆ ಸ್ಪಂಧಿಸಿದ ವ್ಯಾಪಾರಸ್ತರು ತಮ್ಮ ವಹಿವಾಟನ್ನು ಬಂದ ಮಾಡಿ ಬಂದಗೆ ಸಹಾಕಾರ ನೀಡಿದರು.
ಬಂದ ನಿಮಿತ್ತ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ನಗರದಲ್ಲಿ ಅಟೂಗಳ ಸಂಚಾರವು ಸ್ಥಗಿತಗೊಂಡಿತ್ತು. ಇದರಿಂದಾಗ ಗ್ರಾಮೀಣ ಜನರು ತೀವ್ರ ತೊಂದರೆ ಅನುಭವಿಸಿದರು. ಬೀದಿ ವ್ಯಾಪಾರ ಸೇರಿದಂತೆ ಹಣ್ಣು, ಹೂ, ತರಕಾರಿ ವಹಿವಾಟು ಎಂದಿನಂತೆ ಸಾಗಿದ್ದು ಕಂಡು ಬಂದಿತು.
ಪ್ರತಿಭಟನಾಕಾರರು ನಗರದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸುಭಾಶ ವೃತ್ತದಲ್ಲಿ ಜಮಾಗೊಂಡರು. ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತಾ ರೋಖೋ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಠ, ಶರಣು ಗದ್ದುಗೆ, ಭೀಮು ನಾಯಕ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದ ಎಪಿಎಂಸಿ ವಿರುದ್ದ ತಮ್ಮ ಆಕ್ರೋಶವನ್ನು ಹೊರಹಾಕಿದರು.