Wednesday, August 17, 2022

Latest Posts

ಯಾದಗಿರಿಯಲ್ಲಿ 33 ಜನರಲ್ಲಿ ಕೊರೋನಾ ದೃಢ, ಸೋಂಕಿತರ ಸಂಖ್ಯೆ 865ಕ್ಕೆ ಏರಿಕೆ

ಯಾದಗಿರಿ : ನೋವೆಲ್ ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ ಮಾದರಿಗಳ ಪೈಕಿ ಬುಧವಾರ ಪಾಸಿಟಿವ್ ಬಂದ 37 ಮಾದರಿ ಸೇರಿದಂತೆ ಜೂನ್ 17ರವರೆಗೆ ಒಟ್ಟು 865 ವರದಿ ಪಾಸಿಟಿವ್ ಬಂದಿವೆ. ಬುಧವಾರದ 362 ನೆಗೆಟಿವ್ ವರದಿ ಸೇರಿ ಈವರೆಗೆ 20,302 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 253 ಮಾದರಿಗಳು ಸೇರಿದಂತೆ 745 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ತಿಳಿಸಿದ್ದಾರೆ.
40 ಜನ ಗುಣಮುಖ
ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 865 ವ್ಯಕ್ತಿಗಳ ಪೈಕಿ ಬುಧವಾರ ಮತ್ತೆ 40 ಜನ ಗುಣಮುಖರಾಗಿದ್ದು, ಜೂನ್ 17ರವರೆಗೆ ಒಟ್ಟು 478 ಜನ ಗುಣಮುಖರಾಗಿರುತ್ತಾರೆ. ಒಬ್ಬರು ಮೃತಪಟ್ಟಿದ್ದಾರೆ. ಉಳಿದ 386 ಪ್ರಕರಣಗಳು ಸಕ್ರಿಯವಾಗಿರುತ್ತವೆ. ಸೋಂಕಿತರೊAದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1,319 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,716 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 48 ಕಂಟೇನ್‌ಮೆoಟ್ ಝೋನ್‌ಗಳನ್ನು ರಚಿಸಲಾಗಿದೆ. ಇಂದು ಪತ್ತೇಯಾದ ಎಲ್ಲಾ ಮಾದರಿಗಳು ಮಹಾರಾಷ್ಟçದಿಂದ ಬಂದವರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!