ಯಾದಗಿರಿ: ಯಾದಗಿರಿ ತಾಲ್ಲೂಕಿನ ಅಬ್ಬೇತುಮಕೂರ ಗ್ರಾಮದ ಹೊರವಲಯದ ಬಿ.ಇಡ್ ಕಾಲೇಜ ಹತ್ತಿರ ಗದ್ದಿಗೆಯಲ್ಲಿ ೧-೨ ದಿನದ ನವಜಾತ ಅನಾಥ ಗಂಡು ಶಿಶು ಜೀವಂತವಾಗಿ ಪತ್ತೆಯಾಗಿದೆ.
ಇದಕ್ಕೆ ಸಂಬoಧಿಸಿದ ವಾರಸುದಾರು ಯಾರಾದರು ಇದ್ದಲ್ಲಿ ಜಿಲ್ಲಾ ಮಕ್ಕಳ ರಕ್ದಣಾ ಘಟಕ, ಜಿಲ್ಲಾಡಳಿತ ಭವನ (ವಿಧಾನ ಸೌಧ) ಬ್ಲಾಕ್ “ಸಿ” ೧೭ ಚಿತ್ತಾಪೂರ ರಸ್ತೆ, ಯಾದಗಿರಿ ಸಂಬoಧಿಸಿದ ದಾಖಲಾತಿಗಳನ್ನು ೬೦ ದಿನಗಳ ಒಳಗೆ ಸಾದರ ಪಡಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ವಾರಸುದಾರರು ಇಲ್ಲವಾದಲ್ಲಿ ಬಾಲನ್ಯಾಯ ಕಾಯ್ದೆ-೨೦೧೫ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಹಾಗೂ ದತ್ತು ಪ್ರಕ್ರಿಯೆ-೨೦೧೫ರನ್ವಯ ಮಗುವಿಗೆ ಯಾರು ವಾರಸುದಾರರು ವಿಲ್ಲವೆಂದು ಭಾವಿಸಿ ದತ್ತು ಮುಕ್ತ ಆದೇಶದೊಂದಿಗೆ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ. ೦೮೪೭೩-೨೫೩೩೫೪೭ ಅಥವಾ ಮೊ.೯೪೮೩೨೨೦೮೬೩ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.