Friday, July 1, 2022

Latest Posts

ಯಾದಗಿರಿ| ಅಯೋಧ್ಯೆ ರಾಮಮಂದಿರ ಸ್ಥಳದಲ್ಲಿ ಬೌದ್ಧ ಸ್ತೂಪ ಅವಶೇಷ ಪತ್ತೆ ರಕ್ಷಿಸಲು ರಾಷ್ಟ್ರಪತಿಗೆ ಮನವಿ

ಯಾದಗಿರಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಸ್ಥಳದಲ್ಲಿ ಬುದ್ಧ ಸ್ತೂಪದ ಅವಶೇಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದನ್ನು ರಕ್ಷಿಸಲು ಕ್ರಮ ವಹಿಸಬೇಕೆಂದು ಪ್ರಬುದ್ಧ ಬುದ್ಧ ವಿಹಾರ ಸಮಿತಿ ಆಗ್ರಹಿಸಿದೆ.

ಈ ಕುರಿತು ರಾಷ್ಟ್ರಪತಿಗಳಿಗೆ ಹಾಗೂ ಪುರಾತತ್ವ ಇಲಾಖೆ ಹೆಚ್ಚುವರಿ ಡಿಜಿ ಅವರಿಗೆ ಪ್ರತ್ಯೇಕ ಮನವಿಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಿದ ಸಮಿತಿ ಕಾರ್ಯಕರ್ತರು ತಕ್ಷಣ ಸರ್ಕಾರ ಮದ್ಯಸ್ತಿಕೆ ವಹಿಸಿ ಪ್ರಾಚೀನ ಅವಶೇಷಗಳನ್ನು ರಕ್ಷಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವೇಳೆ ದೊರಕಿದ ಬೌದ್ಧ ಧರ್ಮದ ಅವಶೇಷಗಳು ಅಲ್ಲಿ ಬುದ್ಧ ವಿಹಾರ ಇತ್ತು ಎಂಬುದನ್ನು ಸಾಬೀತು ಪಡಿಸುತ್ತಿದ್ದು, ಪುರಾತತ್ವ ಇಲಾಖೆ ಈ ನಿಟ್ಟಿನಲ್ಲಿ ಅವಶೇಷ ರಕ್ಷಣೆಗೆ ಮುಂದಾಗಬೇಕು ಅಯೋಧ್ಯೆಯಲ್ಲಿ ದೊರೆತ ಅವಶೇಷದ ಜಾಗೆಗಳನ್ನು ಬೌದ್ಧ ಧರ್ಮದ ಪ್ರದೇಶವಾಗಿ ರಕ್ಷಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಶಹಾಪೂರದ ಸಾರಿಪುತ್ರ ಬುದ್ಧ ವಿಹಾರ ಧಮ್ಮಗಿರಿ ಕರುಣಾನಂದ ಬಂತೇಜಿ, ಮೆತ್ತಾನಂದ ಭಂತೇಜಿ, ಮದ್ದರಕಿ ಪ್ರಭುದ್ದ ಬುದ್ಧ ವಿಹಾರ ಸಮಿತಿ ಅಧ್ಯಕ್ಷ ಬಾಬುರಾವ ಭೂತಾಳೆ, ಶಹಾಪೂರ ಬುದ್ಧವಿಹಾರದ ನೀಲಕಂಠ ಬಡಿಗೇರ, ಚಂದ್ರಶೇಖರ ಬಾರಿಗಿಡ, ರಾಮಣ್ಣ ಸಾದ್ಯಾಪುರ, ಶಿವಪ್ಪ ಜುನ್ನಾ ಭೀಮರಾಯ ಹೊಸಮನಿ, ಯಾದಗಿರಿ ದಲಿತ ಮುಖಂಡರಾದ ಮರೆಪ್ಪ ಚಟ್ಟೆರಕರ್, ಮಲ್ಲಿನಾಥ ಸುಂಗಲಕರ್, ಸಂಪತ್ ಚಿನ್ನಾಕಾರ, ವಸಂತ ಸುಂಗಲಕರ್, ಗುರು ಬಾಣತಿಹಾಳ, ಭೀಮರಾವ ಭೂತಾಳೆ, ಶಶಿಧರ ಬಾರಿಗಿಡ, ಶಂಕರಾನAದ, ಶಿವು ಈಟೆ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss