Monday, August 8, 2022

Latest Posts

ಯಾದಗಿರಿ : ಇಬ್ಬರ ಮಕ್ಕಳಲ್ಲಿ ಸೋಂಕು ದೃಡ, 15 ಕ್ಕೆ ಏರಿಕೆ: ಜಿಲ್ಲಾಧಿಕಾರಿ ಪ್ರಕಾಶ ರಜಪೂತ

ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಇಬ್ಬರು ಮಕ್ಕಳಲ್ಲಿ ಕೊರಾನಾ ಸೋಂಕು ದೃಡಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳು 15 ಕ್ಕೆ ಏರಿವೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಅವರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟನಲ್ಲಿ ಪಿ.1733 ಬಾಲಕಿ (5) ಹಾಗೂ ಪಿ.1743 ಬಾಲಕ(9) ರಲ್ಲಿ ಸೋಂಕು ಕಂಡು ಬಂದಿದ್ದು ಇವರು ಸಹ ಮಹಾರಾಷ್ಟ್ರದಿಂದ ತಮ್ಮ ಪೋಷಕರೊಂದಿಗೆ ಬಂದವರಾಗಿದ್ದಾರೆ. ಅವರನ್ನು ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಅವಲೋಕನೆಗೆ ಇರಿಸಲಾಗಿದೆ. ಗುರುವಾರದಂದು ಯಾವುದೇ ಪ್ರಕರಣ ಬೆಳಕಿಗೆ ಬಾರದೆ ನಿರಾಳವಾಗಿದ್ದ ಜಿಲ್ಲೆ ಈಗ ಮತ್ತೇ ಎರಡು ಸೋಂಕು ಕಂಡು ಬಂದಿದ್ದು ಜನತೆಯಲ್ಲಿ ಆತಂಕ ಹೆಚ್ಚಿಸುತ್ತಿದೆ.
ಜಿಲ್ಲೆಯಲ್ಲಿ ಸುಮಾರು 2227 ಕ್ಕೂ ಹೆಚ್ಚು ಮಾದರಿಗಳ ಫಲಿತಾಂಶ ಬರಬೇಕಿದೆ. ಜಿಲ್ಲೆಯಲ್ಲಿ ಪ್ರಯೋಗಾಲಯದ ಕೊರತೆ ಇರುವುದರಿಂದ ಕಲಬುರಗಿ ಮತ್ತು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಫಲಿತಾಂಶ ಬರಲು ವಿಳಂಭವಾಗುತ್ತದೆ ಎಂದು ತಿಳಿದು ಬಂದಿದೆ.
ಕೊರೋನಾ ಮಾಹಿತಿ ನೀಡುವಲ್ಲಿ ಜಿಲ್ಲಾಡಳಿತ ವಿಳಂಭ :
ಕೊರೋನ ಸೋಂಕಿನ ಬಗ್ಗೆ ಜಿಲ್ಲಾಡಳಿತವಾಗಲಿ ಮತ್ತು ಆರೋಗ್ಯï ಇಲಾಖೆಯಾಗಲಿ ಮಾಹಿತಿ ನೀಡಲು ವಿಳಂಭ ನೀತಿ ಅನುಸರಿಸುತ್ತಿದೆ. ರಾಜ್ಯ ಬುಲೆಟಿನಲ್ಲಿ ಬಿಡುಗಡೆಯಾಗಿ ಎರಡು ಮೂರು ಗಂಟೆಯಾದರೂ ಸೋಂಕಿತರ ಬಗ್ಗೆ ಮಾಹಿತಿ ನೀಡುತ್ತಿಲ್ಲ. ನಮ್ಮ ಜಿಲ್ಲೆಯ ಆಯಾ ದಿನದ ಸೋಂಕಿತರ ಮಾಹಿತಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ರಜ್ಯ ಬುಲೆಟನ್ ನೋಡಿ ತಿಳಿದು ಕೊಲ್ಳುವ ಪರಸ್ಥಿತಿ ಮಾಧ್ಯಮದವರದಾಗಿದೆ. ಸೋಂಕಿತರ ಜಿಲ್ಲೆಯ ಯಾವ ಊರಿನವರು, ಎಲ್ಲಿ ಕ್ವಾರೆಂಟೈನ ಮಾಡಿರುವ ಬಗ್ಗೆಯಾಗಲಿ, ಅವರ ಟ್ರಾವೆಲ್ ಹಿಸ್ಟ್ರಿ ಕಲೆಹಾಕಲು ಪರದಾಡುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss